ಕಣಿವೆಗೆ ಬಿದ್ದ ಬಸ್: 13 ಪ್ರಯಾಣಿಕರು ಮೃತ್ಯು

Update: 2018-03-13 08:40 GMT

ಉತ್ತರಾಖಂಡ, ಮಾ.13: ಬಸ್ಸೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ 13 ಮಂದಿ ಮೃತಪಟ್ಟ ಘಟನೆ ಉತ್ತರಾಖಂಡದ ಟೋಟಮ್ ಎಂಬಲ್ಲಿ ಸಂಭವಿಸಿದೆ.

ರಾಮ್ ನಗರ್-ಅಲ್ಮೋರಾ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಬಸ್ ನಲ್ಲಿ 24  ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ರಾಜ್ಯ ವಿಪತ್ತು ನಿವರ್ಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ,.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News