ಮೂಡಿಗೆರೆ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-03-13 11:56 GMT

ಮೂಡಿಗೆರೆ, ಮಾ.13: ಇಲ್ಲಿನ ತಾಲೂಕು ರೈತ ಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ನಡೆಯಿತು.

ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಸಮಾರಂಭ ಉದ್ಘಾಟಸಿ ಮಾತನಾಡಿದರು. ಸಮಾರಂಭದಲ್ಲಿ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಗಣಣೀಯ ಸಾಧನೆ ಮಾಡಿದ 6 ಮಂದಿ ಸಾಹಿತಿಗಳನ್ನು ಸನ್ಮಾನಿಸಲಾಯಿತು. 2016ನೇ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪೈಕಿ ಬ್ಯಾರಿ ಸಾಹಿತ್ಯ- ಸಂಶೊಧನೆ ವಿಭಾಗದಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿ, ಕಲೆ ವಿಭಾಗದಲ್ಲಿ ಅಬೂಬಕರ್ ಬಸ್ಸೂರು, ಬ್ಯಾರಿ ಜಾನಪದ ವಿಭಾಗದಲ್ಲಿ ಮುಹಮ್ಮದ್ ಮಣ್ಣಗುಂಡಿ ಹಾಗೂ 2017ನೇ ಸಾಲಿನ ಬ್ಯಾರಿ ಸಾಹಿತ್ಯ-ಸಂಶೋಧನೆಗಾಗಿ ಉಮರ್ ಯು.ಎಚ್, ಬ್ಯಾರಿ ಕಲೆ ವಿಭಾಗದಲ್ಲಿ ಅಬ್ದುಲ್ ಅಝೀಜ್ ಬೈಕಂಪಾಡಿ ಮತ್ತು ಬ್ಯಾರಿ ಜಾನಪದ ವಿಭಾಗದಲ್ಲಿ ಬಿ.ಎಂ.ಹಸೈನರ್ ಕಡಂಬು ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. 

ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ್ ರೈ, ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಪ.ಪಂ ಅಧ್ಯಕ್ಷೆ ರಮೀಬಾಭಿ, ಜಿ.ಪಂ.ಸದಸ್ಯರಾದ ಪ್ರಭಾಕರ್, ನಿಕಿಲ್ ಚಕ್ರವರ್ತಿ, ಕೋಮಾರ್ಕ್ ಸಂಸ್ಥೆ ಮಾಜಿ ಅಧ್ಯಕ್ಷ ಡಿ.ಬಿ.ಸುಬ್ಬೇಗೌಡ, ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್ ಜಯರಾಂ, ಕಸಾಪ ಅಧ್ಯಕ್ಷ ಗಣೇಶ್ ಮಗ್ಗಲಮಕ್ಕಿ, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಕಾಫಿ ಬೆಳೆಗಾರರಾದ ರಘುರಾಮ್ ಅಡ್ಯಂತಾಯ, ವಿ.ಎಚ್.ಉಮರ್, ತುಳು ಕೂಟದ ಅಧ್ಯಕ್ಷ ವಸಂತ್ ಎಸ್.ಪೂಜಾರಿ, ಬ್ಲಾಕ್ ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಎ.ಸಿ.ಅಯೂಬ್ ಹಾಜಿ, ಎ.ಯು.ಇಬ್ರಾಹಿಂ, ಎಚ್.ಎ.ಮಹಮ್ಮದ್ ರಫೀಕ್, ಇಬ್ರಾಹಿಂ ಶಾಫಿ, ಬಿ.ಮಹಮ್ಮದ್ ಕೊಪ್ಪ, ಎಂ.ಎಚ್ ಮಹಮ್ಮದ್ ಹಾಜಿ, ಕೆ.ಎಚ್ ಉಮರಬ್ಬ, ವಿ.ಕೆ.ಮಹಮ್ಮದ್ ಶೃಂಗೇರಿ, ಉದ್ಯಮಿ ಅಕ್ರಂ ಹಾಜಿ, ಅಹಮ್ಮದ್ ಬಾವ ಬಿಳಗುಳ, ಬಿ.ಎಚ್ ಮಹಮ್ಮದ್, ಫಿಶ್ ಮೋನು, ಬಿಎಸ್‍ಪಿ ಜಿಲ್ಲಾ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News