ಪ್ರಧಾನಿ ಮೋದಿಯವರ ಶೇ.60ರಷ್ಟು ಟ್ವಿಟರ್ ಫಾಲೋವರ್ಸ್ ನಕಲಿ!

Update: 2018-03-14 07:34 GMT

ಹೊಸದಿಲ್ಲಿ, ಮಾ.14: ಟ್ವಿಟರ್‌ನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ರಾಜಕೀಯ ಮುಖಂಡರ ಪೈಕಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ. ಆದರೆ, ಇತ್ತೀಚೆಗೆ ಟ್ವಿಪ್ಲೊಮೆಸಿ ನಡೆಸಿರುವ ಅಧ್ಯಯನದಲ್ಲಿ ಮೋದಿಯವರ ಟ್ವಿಟರ್ ಖಾತೆಯಲ್ಲಿರುವ ಶೇ.60ರಷ್ಟು ಅನುಯಾಯಿಗಳು ನಕಲಿ ಎಂದು ಬಹಿರಂಗವಾಗಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವ ಟ್ವಿಪ್ಲೊಮೆಸಿ, ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಸರಕಾರಗಳಿಗೆ ಡಿಜಿಟಲ್ ಕಾರ್ಯಕ್ರಮಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮೋದಿಯವರ 4.1 ಕೋಟಿ ಟ್ವಿಟರ್ ಹಿಂಬಾಲಕರಲ್ಲಿ 2.5 ಕೋಟಿ ಹಿಂಬಾಲಕರು ನಕಲಿ ಎಂದು ಗೊತ್ತಾಗಿದೆ.

  ಪೋಪ್ ಫ್ರಾನ್ಸಿಸ್, ಅಮೆರಿಕದ ಅಧ್ಯಕ್ಷ ಟ್ರಂಪ್ ಹಾಗೂ ಭಾರತದ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಟ್ವಿಟರ್ ಹಿಂಬಾಲಕರಿರುವ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಮೋದಿ ಟ್ವಿಟರ್ ಖಾತೆಯಲ್ಲಿ ನಕಲಿ ಅನುಯಾಯಿಗಳ ಶೇಕಡಾಂಶ ಫ್ರಾನ್ಸಿಸ್ ಹಾಗೂ ಡೊನಾಲ್ಡ್ ಟ್ರಂಪ್‌ಗಿಂತ ಜಾಸ್ತಿಯಿದೆ. ಟ್ರಂಪ್ ಅವರ 48.9 ಮಿಲಿಯನ್ ಫಾಲೋವರ್ಸ್‌ಗಳಲ್ಲಿ ಶೇ.37 ನಕಲಿ ಇದ್ದರೆ, ಭಾರತದ ಪ್ರಧಾನಿ ಮೋದಿಯವರ 41 ಮಿಲಿಯನ್ ಹಿಂಬಾಲಕರಲ್ಲಿ ಶೇ.60ರಷ್ಟು ನಕಲಿ ಹಿಂಬಾಲಕರಿದ್ದಾರೆ. 17 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಪೋಪ್ ಫ್ರಾನ್ಸಿಸ್‌ಗೆ ಶೇ.59 ನಕಲಿ ಹಿಂಬಾಲಕರಿದ್ದಾರೆಂದು ಟ್ವಿಪ್ಲೊಮೆಸಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News