ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ 41.16 ಲಕ್ಷ ಬ್ಯಾಂಕ್ ಖಾತೆ ರದ್ದುಪಡಿಸಿದ ಎಸ್‌ಬಿಐ!

Update: 2018-03-14 08:28 GMT

ಇಂದೋರ್, ಮಾ.14: ತಿಂಗಳಲ್ಲಿ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾಗಿರುವ 41.16 ಲಕ್ಷ ಗ್ರಾಹಕರ ಉಳಿತಾಯ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ತಿಳಿಸಿದೆ.
 ಮಧ್ಯಪ್ರದೇಶದ ನೀಮುಚ್‌ನ ಚಂದ್ರಶೇಖರ್ ಗೌಡ್ ಎಂಬಾತ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಮೂಲಕ ಸಲ್ಲಿಸಿದ ಅರ್ಜಿಗೆ ಎಸ್‌ಬಿಐ ಈ ರೀತಿ ಉತ್ತರಿಸಿದೆ.
ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆ ಮೇಲೆ ದಂಡ ವಿಧಿಸುವ ನಿಬಂಧನೆಗಳ ಅನ್ವಯ 2017ರ ಎಪ್ರಿಲ್ 1 ಹಾಗೂ 2018ರ ಜನವರಿ 31ರ ನಡುವೆ 41.16 ಲಕ್ಷ ಉಳಿತಾಯ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 41 ಕೋಟಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿದೆ. ಈ ಪೈಕಿ 16 ಕೋಟಿ ಪ್ರಧಾನಮಂತ್ರಿ ಜನ್‌ಧನ್ ಯೋಜನೆ ಅಥವಾ ಮೂಲ ಉಳಿತಾಯ ಖಾತೆ(ಬಿಎಸ್‌ಬಿಡಿ) ಹಾಗೂ ಪಿಂಚಣಿದಾರರು, ಅಪ್ರಾಪ್ತರು, ಸಾಮಾಜಿಕ ಭದ್ರತೆ ಪ್ರಯೋಜನ ಹೊಂದಿರುವವರಿಗೆ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News