ತಮಿಳುನಾಡು: ದಿನಕರನ್ ರ ನೂತನ ರಾಜಕೀಯ ಪಕ್ಷ ಅಸ್ತಿತ್ವಕ್ಕೆ

Update: 2018-03-15 05:47 GMT

ಚೆನ್ನೈ, ಮಾ,15: ತಮಿಳುನಾಡಿನಲ್ಲಿ ಇನ್ನೊಂದು ರಾಜಕೀಯ ಪಕ್ಷ ಉದಯಿಸಿದೆ. ಆರ್ ಕೆ.ನಗರದ ಶಾಸಕ ಟಿಟಿವಿ ದಿನಕರನ್ ಅವರ ಹೊಸ ಪಕ್ಷ ‘ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಹೊಸ ಪಕ್ಷ ಗುರುವಾರ ರಾಜಕೀಯ ಆಖಾಡಕ್ಕೆ ಕಾಲಿಟ್ಟಿದೆ.

ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಅವರ ಸ್ನೇಹಿತೆ ವಿ.ಕೆ. ಶಶಿಕಲಾ ಅವರ ಆಪ್ತರಾಗಿರುವ ದಿನಕರನ್ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದರು.  ನೂತನ ಪಕ್ಷದ ಧ್ವಜದಲ್ಲಿ ಜಯಲಲಿತಾ ಅವರ ಭಾವಚಿತ್ರವಿದೆ.

ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಚೆನ್ನೈನ ಆರ್ ಕೆ ನಗರದ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಅವರು ಭರ್ಜರಿ ಜಯ ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News