ರಾಜ್ಯಾದ್ಯಂತ ಬೃಹತ್ ಆಹಾರ ಪಾರ್ಕ್‌ಗಳ ಸ್ಥಾಪನೆ: ತಮಿಳುನಾಡು ಉಪಮುಖ್ಯಮಂತ್ರಿ

Update: 2018-03-15 14:13 GMT

ಚೆನ್ನೈ, ಮಾ.15: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವಂಥ ಬೃಹತ್ ಫುಡ್ ಪಾರ್ಕ್‌ಗಳನ್ನು ರಚಿಸಲು ಸರಕಾರ ಯೋಚಿಸಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಗುರುವಾರ ತಿಳಿಸಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ಪನ್ನೀರ್‌ಸೆಲ್ವಂ, ಪ್ರಸ್ತಾವಿತ ಬೃಹತ್ ಫುಡ್ ಪಾರ್ಕ್ ಗಳ ಜೊತೆಗೆ ವಿಲ್ಲುಪುರಂ ಜಿಲ್ಲೆಯ ಪೆಲಕುಪ್ಪಂನಲ್ಲಿ 450 ಎಕರೆ ಜಾಗದಲ್ಲಿ ಅಲ್ಟ್ರಾ ಮೆಗಾ ಫುಡ್ ಪಾರ್ಕ್‌ ಅನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಫುಡ್ ಪಾರ್ಕ್‌ಗಳು ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಮೂಲಕ ತರಕಾರಿ ಮತ್ತು ಹಣ್ಣುಹಂಪಲುಗಳು, ಮೀನು, ಡೈರಿ ಉತ್ಪಾದನೆ, ಕೋಳಿ ಹಾಗೂ ಮಾಂಸದ ಸಂಸ್ಕರಣಾ ಕೇಂದ್ರಗಳಾಗಿ ಕಾರ್ಯಾಚರಿಸಲಿವೆ. ಈ ಫುಡ್ ಪಾರ್ಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳು ಕೂಡಾ ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ. ಇಂತಹ ಫುಡ್ ಪಾರ್ಕ್‌ಗಳನ್ನು ಥೇನಿ, ವಿರುದುನಗರ್, ಈರೋಡ್, ಕಡಲೋರ್, ಸೇಲಂ, ದಿಂಡಿಗಲ್, ತಿರುನೆಲ್ವೇಲಿ, ತಿರುವಣ್ಣಮಲೈ, ಕೃಷ್ಣಗಿರಿ ಹಾಗೂ ಇತರ ಕಡೆಗಳಲ್ಲಿ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News