ನಗರದ ವೃತ್ತಕ್ಕೆ ಮೋದಿ ಹೆಸರಿಟ್ಟ ವೃದ್ಧನ ತಲೆ ಕತ್ತರಿಸಿದ ದುಷ್ಕರ್ಮಿಗಳು: ಆರೋಪ

Update: 2018-03-16 15:46 GMT

ಪಾಟ್ನಾ, ಮಾ.16: ಸುಮಾರು 40ರಿಂದ 50 ಮಂದಿಯ ತಂಡವೊಂದು 70 ವರ್ಷದ ವೃದ್ಧರೋರ್ವರ ಮೇಲೆ ದಾಳಿ ನಡೆಸಿ ಅವರ ತಲೆ ಕತ್ತರಿಸಿರುವ ಘಟನೆ  ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ನಡೆದಿದೆ. ಪಟ್ಟಣದ ವೃತ್ತಕ್ಕೆ ‘ನರೇಂದ್ರ ಮೋದಿ ಚೌಕ್’ ಎಂದು ಹೆಸರಿಟ್ಟಿದ್ದರಿಂದ ಅವರನ್ನು ಹತ್ಯೆಗೈಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತಪಟ್ಟವರನ್ನು ರಾಮಚಂದ್ರ ಯಾದವ್ ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಕಾರ್ಯಕರ್ತರಾಗಿದ್ದು, ಸುಮಾರು 40ರಿಂದ 50 ಮಂದಿಯ ತಂಡ ಹಾಕಿ ಸ್ಟಿಕ್ ಹಾಗು ಕತ್ತಿಗಳಿಂದ ಅವರ ಮೇಲೆ ದಾಳಿ ನಡೆಸಿತ್ತು ಎಂದು ಆರೋಪಿಸಲಾಗಿದೆ.

ವೃತ್ತಕ್ಕೆ ನರೇಂದ್ರ ಮೋದಿ ಹೆಸರಿಟ್ಟಿದ್ದರಿಂದ ಜಗಳ ನಡೆದಿತ್ತು ಎನ್ನಲಾಗಿದೆ. “25ರಿಂದ 30 ಬೈಕ್ ಗಳಲ್ಲಿ ಆಗಮಿಸಿದ ಅವರು ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ವೃತ್ತಕ್ಕೆ ಇಟ್ಟ ವಿಚಾರದ ಬಗ್ಗೆಯೇ ವಿವರಿಸಲು ನನ್ನ ತಂದೆ ತೆರಳಿದರು. ಆದರೆ ಅವರ ತಲೆ ಕತ್ತರಿಸಲಾಯಿತು” ಎಂದು ಮೃತ ರಾಮಚಂದ್ರ ಯಾದವ್ ರ ಪುತ್ರ ಬೆಹಲಾ ಪಂಚಾಯತ್ ನ ಬಿಜೆಪಿ ಮುಖ್ಯಸ್ಥ ನರಾಯ ಹೇಳಿದ್ದಾರೆ.

ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News