ಉತ್ತರ ಪ್ರದೇಶ: 37 ಐಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-03-17 09:47 GMT

ಲಕ್ನೋ, ಮಾ.17: ಉತ್ತರ ಪ್ರದೇಶ ಸರಕಾರವು 37 ಐಎಎಸ್ ಅಧಿಕಾರಿಗಳು ಹಾಗು 16 ಜಿಲ್ಲಾ ಮ್ಯಾಜಿಸ್ಟ್ರೇಟರುಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಇಷ್ಟೇ ಅಲ್ಲದೆ, ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಎಣಿಕೆಯ ಸಂದರ್ಭ ಮತಎಣಿಕೆಯ ವರದಿ ಮಾಡದಂತೆ ಮಾಧ್ಯಮಗಳನ್ನು ತಡೆದ ಗೋರಖ್ ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲರನ್ನು ದೇವಿಪಟನ್ ನ ವಿಭಾಗೀಯ ಕಮಿಷನರ್ ಆಗಿ ನೇಮಿಸಿ ಮುಂಭಡ್ತಿ ನೀಡಿದೆ.

ಇಷ್ಟೇ ಅಲ್ಲದೆ ಸುಮಾರು 37 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಗೋರಖ್ ಪುರ ಲೋಕಸಭಾ ಉಪಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುತ್ತಿದ್ದಂತೆ ಮತದಾನ ಕೇಂದ್ರದಿಂದ ಪತ್ರಕರ್ತರನ್ನು ದೂರವಿರಿಸಲು ಪ್ರಯತ್ನಿಸಿ ಗೋರಖ್ ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ ವಿವಾದದ ಕೇಂದ್ರ ಬಿಂದುವಾಗಿದ್ದರು. ಅವರು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸಮೀಪವರ್ತಿ ಎಂದೂ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತ್ತು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News