ಕೆ.ಆರ್ ಪುರ: ಅಕ್ರಮ ಗಾಂಜಾ, ಕೊಕೇನ್ ಮಾರುತ್ತಿದ್ದ ನೈಜೀರಿಯ ಪ್ರಜೆಯ ಬಂಧನ
Update: 2018-03-17 16:29 GMT
ಕೆ.ಆರ್ ಪುರ,ಮಾ.17: ಅಕ್ರಮವಾಗಿ ಗಾಂಜಾ ಮತ್ತು ಕೊಕೇನ್ ಮಾರುತ್ತಿದ್ದ ನೈಜೀರಿಯ ಪ್ರಜೆಯನ್ನು ಬಂಧಿಸಿದ ಪೊಲೀಸರು, ಆತನಿಂದ 550 ಗ್ರಾಂ ಗಾಂಜಾ ಹಾಗೂ 10 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಎವಿರಿಸ್ಟಸ್ ಚಿಮೇಝಿ (29) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಕಳೆದ 4 ತಿಂಗಳಿನಿಂದ ಟಿಸಿ ಪಾಳ್ಯದಲ್ಲಿ ವಾಸವಾಗಿದ್ದ. ಇಂದು ಬಾಣಸವಾಡಿಯಲ್ಲಿ ವಾಸವಾಗಿರುವ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದ ವೇಳೆ, ಖಚಿತ ವರ್ತಮಾನದ ಮೇರೆಗೆ ಬೆಳಿಗ್ಗೆ 10.30 ಕ್ಕೆ ಕೆಆರ್ ಪುರ ಟಿ.ಸಿ.ಪಾಳ್ಯದ ಸೆಂಟ್ ಆಂಥೋನಿ ಚರ್ಚ್ ಸಮೀಪ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಿಸಿದ ಜಯರಾಜ್.ಪಿಐ, ಕೆಆರ್ ಪುರ ಪೊಲೀಸ್ ಠಾಣೆ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಲಾಗಿದೆ.