ಮುಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಚರ್ಚೆ: ಬಿಜೆಪಿ ಭರವಸೆ

Update: 2018-03-18 05:35 GMT

ಹೊಸದಿಲ್ಲಿ, ಮಾ.18: ಚುನಾವಣೆಯಲ್ಲಿ ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಗಳಿಗೆ ಮರಳುವ ಬಗ್ಗೆ ಚರ್ಚಿಸಲು ತಾನು ಮುಕ್ತವಾಗಿದ್ದೇನೆ ಎಂದು ಬಿಜೆಪಿ ಹೇಳಿದೆ.

ಮುಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಗಳನ್ನು ಉಪಯೋಗಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಆಗ್ರಹಿಸಿದ ಒಂದು ದಿನದ ಬಳಿಕ ಬಿಜೆಪಿ ಈ ಹೇಳಿಕೆ ನೀಡಿದೆ.

“ಬ್ಯಾಲೆಟ್ ಪೇಪರ್ ನಿಂದ ಇವಿಎಂಗೆ ಬದಲಾಗುವ ಬಗ್ಗೆ ಎಲ್ಲರ ಒಮ್ಮತದ ತೀರ್ಮಾನದ ಬಳಿಕ ನಿರ್ಧರಿಸಲಾಗಿತ್ತು ಎಂದು ನಾನು ಕಾಂಗ್ರೆಸ್ ಗೆ ನೆನಪಿಸಲು ಬಯಸುತ್ತೇನೆ. ಇಂದು ಎಲ್ಲಾ ಪಕ್ಷಗಳು ಬ್ಯಾಲೆಟ್ ಪೇಪರ್ ಗಳಿಗೇ ಮರಳಬೇಕೆಂದು ಇಚ್ಛಿಸುವುದಾದರೆ ಚರ್ಚೆಗಳ ಬಳಿಕ ನಾವಿದನ್ನು ಪರಿಗಣಿಸಬಹುದು” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಹಾದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News