ಅಮೆರಿಕಾ: ಪುತ್ತಿಗೆ ಮಠದ 10ನೆ ಶಾಖೆ ಲೋಕಾರ್ಪಣೆ

Update: 2018-03-19 16:35 GMT

ಉಡುಪಿ, ಮಾ.19: ಅಮೆರಿಕಾದ ಆಗ್ನೇಯ ಭಾಗದಲ್ಲಿರುವ ಅಟ್ಲಾಂಟಾ ಮಹಾನಗರದಲ್ಲಿ ಪುತ್ತಿಗೆ ಮಠದ 10ನೆ ಅಂತಾರಾಷ್ಟ್ರೀಯ ಶಾಖೆ ಶ್ರೀಕೃಷ್ಣ ವೃಂದಾವನವನ್ನು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾ.18 ರಂದು ಲೋಕಾರ್ಪಣೆ ಮಾಡಿದರು.

ಈ ಶಾಖೆ ಜಗದ್ಗುರು ಮಧ್ವಾಚಾಚಾರ್ಯರ ಭಕ್ತಿ ಸಿದ್ಧಾಂತದ ಪ್ರಸಾರದ ಪ್ರಮುಖ ಉದ್ದೇಶವನ್ನು ಹೊಂದಿದ್ದು, ಅಟ್ಲಾಂಟಾ ಭಕ್ತರ ಭಕ್ತಿಗೆ ಯುಗಾದಿಯ ಪರ್ವಕಾಲದಲ್ಲಿ ಕೃಷ್ಣ ಅವತಾರ ಮಾಡಿದ್ದಾನೆ ಎಂದು ಸ್ವಾಮೀಜಿ ತನ್ನ ಸಂದೇಶ ದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಸ್ವಾಮೀಜಿ ನೂರಾರು ಭಕ್ತರಿಗೆ ತಪ್ತ ಮುದ್ರಾ ಧಾರಣೆಯನ್ನು ನಡೆಸಿದರು. ಪುತ್ತಿಗೆ ವಿದ್ಯಾಪೀಠದಲ್ಲಿ ಅಧ್ಯಯನ ನಡೆಸಿದ ವೈದಿಕರನ್ನು ಮತ್ತು ಅಡುಗೆಯವರನ್ನು ಅಲ್ಲಿ ವ್ಯವಸ್ಥೆಗಾಗಿ ನೇಮಿಸಲಾಗಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಶ್ರೀಕೃಷ್ಣವೃಂದಾವನವನ್ನು ಪುತ್ತಿಗೆ ಸ್ವಾಮೀಜಿ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News