ಕತ್ತು ಸೀಳಿ, 54 ಬಾರಿ ಇರಿದು ಸ್ನೇಹಿತನನ್ನೇ ಕೊಂದ ಯುವಕ

Update: 2018-03-23 14:18 GMT

ಮುಂಬೈ, ಮಾ.23: 18 ವರ್ಷದ ಯುವಕನೊಬ್ಬನನ್ನು 21 ವರ್ಷದ ಸ್ನೇಹಿತನೊಬ್ಬ ಕತ್ತು ಸೀಳಿ, 54 ಬಾರಿ ಇರಿದು ಕೊಲೆಗೈದ ಘಟನೆ ಇಲ್ಲಿನ ಶಾಹು ನಗರ್ ನಲ್ಲಿ ನಡೆದಿದೆ.

ಆದರೆ ಈ ಕೊಲೆಗೆ ಆರೋಪಿ ನೀಡಿದ ಕಾರಣವೇ ವಿಚಿತ್ರವಾಗಿದೆ. ಗೆಳೆಯ ತನ್ನೊಂದಿಗೆ ಯಾವಾಗಲೂ ಇಂಗ್ಲಿಷ್ ನಲ್ಲೇ ಮಾತನಾಡುತ್ತಿದ್ದ. ಈ ಮೂಲಕ ಅನಕ್ಷರಸ್ಥನಾಗಿದ್ದ ತನ್ನನ್ನು ಕೀಳಾಗಿ ಕಾಣುತ್ತಿದ್ದ. ಆದ್ದರಿಂದ ಯಾವಾಗಲೂ ಇಂಗ್ಲಿಷ್ ಮಾತನಾಡುತ್ತಿದ್ದ ಆತನ ಮೇಲೆ ಕೋಪಗೊಂಡು ಕೊಲೆಗೈದೆ ಎಂದು ಆರೋಪಿ ಹೇಳಿದ್ದಾನೆ.

ಕೃತ್ಯ ಎಸಗಿದ ನಂತರ ಆರೋಪಿ ಮುಹಮ್ಮದ್ ಅಮೀರ್ ಅಬ್ದುಲ್ ವಹೀದ್ ರಹೀನ್ ಶಾಹು ನಗರ ಪೊಲೀಸ್ ಠಾಣೆಗೆ ತೆರಳಿ ತಾನು ಎಸಗಿರುವ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ.

ಆತ ಯಾವಾಗಲೂ ನನ್ನನ್ನು ಕೀಳಾಗಿ ಕಾಣುತ್ತಿದ್ದ, ತಮಾಷೆ ಮಾಡುತ್ತಿದ್ದ. ಇದರಿಂದ ತಾನು ಕೋಪಗೊಂಡಿದ್ದೆ. ಈ ಕೊಲೆಗೆ ಒಂದು ವಾರದಿಂದಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ ಎಂದು ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.

ಬುಧವಾರ ತನ್ನ ಸ್ನೇಹಿತನನ್ನು ಆರೊಪಿ ರಹೀನ್ ಬಾಂದ್ರಾಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವರಿಬ್ಬರೂ ಮದ್ಯ ಖರೀದಿಸಿದ್ದರು. ಕೊನೆಗೆ ಶೌಚಾಲಯದಲ್ಲಿ ರಹೀನ್ ಯುವಕನ ಕತ್ತು ಸೀಳಿ ಕೊಲೆಗೈದಿದ್ದ. ಯುವಕ ಕುಸಿದುಬಿದ್ಧ ನಂತರ ಆತನಿಗೆ ರಹೀನ್ 54 ಬಾರಿ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News