ನನ್ನ ಹೆಸರು ಮೋದಿ, ನಿಮ್ಮ ಮಾಹಿತಿಯನ್ನು ನಾನು ಅಮೆರಿಕನ್ ಕಂಪೆನಿಗಳಿಗೆ ನೀಡುತ್ತೇನೆ

Update: 2018-03-25 11:06 GMT

ಹೊಸದಿಲ್ಲಿ, ಮಾ.25: ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಮಾಹಿತಿಯನ್ನು ಅಮೆರಿಕದ ಕಂಪೆನಿಗಳಿಗೆ ಸೋರಿಕೆ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

"ಹಾಯ್! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನನ್ನ ಅಧಿಕೃತ ಆ್ಯಪ್ ಗೆ ನೀವು ಸೈನ್ ಅಪ್ ಆದರೆ ಅಮೆರಿಕನ್ ಕಂಪೆನಿಗಳಲ್ಲಿರುವ ನನ್ನ ಸ್ನೇಹಿತರಿಗೆ ನಿಮ್ಮ ಎಲ್ಲಾ ಡಾಟಾ ನೀಡುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಮೋದಿ ಆ್ಯಪ್ ನಿಂದ ಬಳಕೆದಾರರ ಒಪ್ಪಿಗೆ ಪಡೆಯದೇ ಅವರ ಇ-ಮೇಲ್ ಐಡಿ, ಫೋಟೊ, ಹೆಸರು ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ಮೂರನೆ ಡೊಮೈನ್‍ಗಳಿಗೆ ಕಳುಹಿಸಲಾಗುತ್ತಿದೆ ಎಂಬ ಬಗ್ಗೆ ಫ್ರಾನ್ಸ್ ನ ಬೇಹುಗಾರ ಹ್ಯಾಕರ್ ಮಾಡಿದ ಸರಣಿ ಟ್ವೀಟ್‍ಗಳ ಹಿನ್ನೆಲೆಯಲ್ಲಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ಈ ಪ್ರಮುಖ ಸುದ್ದಿಯನ್ನು ಮುಖ್ಯವಾಹಿನಿ ಮಾಧ್ಯಮಗಳು ಎಂದಿನಂತೆ ಹೂತುಹಾಕಿವೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News