ಮೋದಿ ಆ್ಯಪ್‌ನಿಂದ ದತ್ತಾಂಶ ಸೋರಿಕೆ ಕಟ್ಟುಕತೆ: ಕೇಂದ್ರ ಸಚಿವ ಅಲ್ಫೋನ್ಸ್

Update: 2018-03-25 14:30 GMT

ಹೊಸದಿಲ್ಲಿ, ಮಾ.25: ಮೋದಿ ಆ್ಯಪ್‌ನಿಂದ ಜನರ ದತ್ತಾಂಶ ಸೋರಿಕೆಯಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿರುವ ಕೇಂದ್ರ ಸಚಿವ ಅಲ್ಫೋನ್ಸ್ ಕೆ.ಜೆ, ಇದೆಲ್ಲ ಕಟ್ಟುಕತೆಗಳು ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರು ನಿಮ್ಮ ಮಾಹಿತಿಯನ್ನು ಖಾಸಗಿ ಕಂಪೆನಿಗೆ ನೀಡುತ್ತಾರೆ ಎಂಬುದನ್ನು ನೀವು ನಂಬುತ್ತೀರಾ?, ಇದೆಲ್ಲಾ ಕಟ್ಟುಕತೆಗಳು ಅದನ್ನು ನಂಬಬೇಡಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಅಲ್ಫೋನ್ಸ್ ಕೆ.ಜೆ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಜನರೊಂದಿಗೆ ಸಮಾಲೋಚನೆ ನಡೆಸಲು ಮತ್ತು ಅವರ ಪ್ರತಿಕ್ರಿಯೆಯನ್ನು ಪಡೆಯಲು ಅನೇಕ ಬಾರಿ ತಮ್ಮ ವೈಯಕ್ತಿಕ ಮೊಬೈಲ್ ತಂತ್ರಾಂಶ ನರೇಂದ್ರ ಮೋದಿ ಆ್ಯಪನ್ನು ಬಳಸುತ್ತಾರೆ. ಆಧಾರ್‌ನಲ್ಲಿ ನೀಡಲಾಗಿರುವುದು ನಿಮ್ಮ ಹೆಸರು ಮತ್ತು ವಿಳಾಸ ಮಾತ್ರ. ನಿಮ್ಮ ಬಯೋಮೆಟ್ರಿಕ್ ದತ್ತಾಂಶ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಬಳಿಯಿದೆ ಮತ್ತು ಅದನ್ನು ಕದಿಯಲಾಗಿಲ್ಲ. ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿದೇಶದಲ್ಲಿ ಬಿಳಿಯರಿಗೆ ನಮ್ಮ ಬೆರಳಚ್ಚು ನೀಡಲು ಅಥವಾ ಅವರ ಮುಂದೆ ಸಂಪೂರ್ಣವಾಗಿ ನಗ್ನರಾಗಲು ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ನಿಮ್ಮದೇ ಸರಕಾರ ಕೇವಲ ನಿಮ್ಮ ಹೆಸರು ಮತ್ತು ವಿಳಾಸವನ್ನು ಕೇಳಿದರೆ ಸಾಕು ತಮ್ಮ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ದೇಶಾದ್ಯಂತ ಹೊಯಿಲೆಬ್ಬಿಸಲಾಗುತ್ತದೆ ಎಂದು ಅಲ್ಫೋನ್ಸ್ ಈ ಹಿಂದೆ ದತ್ತಾಂಶ ಸೋರಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News