ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಡಾ. ಅಂಬೇಡ್ಕರ್ ಕುರಿತು ಹೇಳಿದ್ದೇನು ?

Update: 2018-03-25 16:02 GMT

ಹೊಸದಿಲ್ಲಿ, ಮಾ. 25: ಭೀಮ್‌ರಾವ್ ಅಂಬೇಡ್ಕರ್ ಅವರ ಬಗ್ಗೆ ಹಲವರು ಅಣಕವಾಡಿದರು, ಹಿಂದುಳಿದ ಕುಟುಂಬದ ಮಗನಾದ ಅವರು ಬೆಳೆಯದಂತೆ ಹಲವರು ಪ್ರಯತ್ನಿಸಿದರು. ಆದರೆ, ಪ್ರಯತ್ನಿಸಿದವರು ವಿಫಲರಾದರು. ಯಾಕೆಂದರೆ, 'ನವ ಭಾರತ' ಬಡವರು ಮತ್ತು ಹಿಂದುಳಿದವರಿಗೆ ಸೇರಿದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ತಿಂಗಳ 'ಮನ್ ಕಿ ಬಾತ್' ರೇಡಿಯೋ ಭಾಷಣದಲ್ಲಿ ಪ್ರಧಾನಿ ಅವರು ಭಾರತದ ಆರ್ಥಿಕತೆಯಲ್ಲಿ ಕೃಷಿ ಹಾಗೂ ರೈತರನ್ನು ಪ್ರಮುಖ ಅಂಶ ಎಂದು ಪರಿಗಣಿಸಿದ್ದ ಮಹಾತ್ಮಾ ಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ, ರಾಮ್ ಮನೋಹರ್ ಲೋಹಿಯಾ, ಚರಣ್ ಸಿಂಗ್ ಹಾಗೂ ದೇವಿಲಾಲ್ ಅವರಂತಹ ಮಾದರಿ ನಾಯಕರನ್ನ ಸ್ಮರಿಸಿದರು.

ಬಡವ ಅಥವಾ ಶ್ರೀಮಂತ ಕುಟುಂಬದಲ್ಲಿ ಜನಿಸುವುದಕ್ಕೂ ಯಶಸ್ಸಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಭಾರತದಂತಹ ದೇಶದಲ್ಲಿ ಹುಟ್ಟಿದ ಬಡವರು ಕೂಡ ದೊಡ್ಡ ಕನಸುಗಳನ್ನು ಕಾಣಬಹುದು. ಅದನ್ನು ಸಾಕಾರ ಮಾಡಿಕೊಳ್ಳಬಹುದು ಎಂದು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಪ್ರತಿಬಂಧಕ ಆರೋಗ್ಯ ಸೇವೆಗೆ ಒತ್ತು ನೀಡಿ

ಪ್ರತಿಬಂಧಕ ಆರೋಗ್ಯ ಸೇವೆಯ ಬಗ್ಗೆ ಹೆಚ್ಚು ಜಾಗೃತರಾಗಿರಿ ಎಂದು ಜನರನ್ನು ಆಗ್ರಹಿಸಿರುವ ಪ್ರಧಾನಿ, ಪ್ರತಿಬಂಧಕ ಆರೋಗ್ಯ ಸೇವೆ ಆ ವ್ಯಕ್ತಿಗೆ ಮಾತ್ರ ಅನುಕೂಲ ಅಲ್ಲ. ಬದಲಾಗಿ ಅವರ ಕುಟುಂಬ ಹಾಗೂ ಸಮಾಜಕ್ಕೂ ಅನುಕೂಲ ಎಂದರು.

ಪ್ರತಿಬಂಧಕ ಆರೋಗ್ಯ ಸೇವೆ ಅಗ್ಗ ಹಾಗೂ ಸುಲಭವಾಗಿ ಲಭ್ಯವಾಗುತ್ತದೆ. ಪ್ರತಿಬಂಧಕ ಆರೋಗ್ಯ ಸೇವೆ ಬಗ್ಗೆ ನಾವು ಹೆಚ್ಚು ಹೆಚ್ಚು ಜಾಗರೂಕವಾಗಿರಬೇಕು. ಅದು ವ್ಯಕ್ತಿಗೆ, ಆತನ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.

ಆರೋಗ್ಯವಂತ ಭಾರತ ಹಾಗೂ ಸ್ವಚ್ಛ ಭಾರತ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಎಂದು ನಾನು ಭಾವಿಸುತ್ತೇನೆ. ಆರೋಗ್ಯ ವಲಯಲ್ಲಿ ದೇಶ ಸಾಂಪ್ರದಾಯಿಕ ವಿಧಾನದಲ್ಲಿ ಮುಂದುವರಿಯುತ್ತಿದೆ. ಈ ಹಿಂದೆ ಪ್ರತಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸಗಳು ಕೇವಲ ಕೇಂದ್ರ ಆರೋಗ್ಯ ಸಚಿವಾಲಯದ್ದಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ಇಲಾಖೆ, ರಾಜ್ಯಸರಕಾರಗಳು ಹಾಗೂ ಇತರ ಇಲಾಖೆಗಳು ಆರೋಗ್ಯ ಭಾರತಕ್ಕಾಗಿ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕೃಷ್ಯುತ್ಪನ್ನ ಬೆಲೆ ಖಾತರಿ ಏರಿಕೆ

ಭೂ ಬಾಡಿಗೆ ಹಾಗೂ ರೈತನ ಕುಟುಂಬದ ಸದಸ್ಯರ ಪಾವತಿಸದ ಕೂಲಿ ಸೇರಿದಂತೆ ಸಮಗ್ರ ಉತ್ಪಾದನಾ ವೆಚ್ಚ ಆಧರಿಸಿ ಕೃಷ್ಯುತ್ಪನ್ನಗಳಿಗೆ ಖಾತರಿ ಬೆಲ ಏರಿಕೆ ಮಾಡಲು ಯೋಜಿಸಲಾಗಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News