ಅತ್ಯಾಚಾರ ಆರೋಪಿಗಳನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

Update: 2018-03-25 18:42 GMT

ಭೋಪಾಲ್, ಮಾ.25: ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ನಾಲ್ಕು ಜನರನ್ನು ಬಂಧಿಸಿದ ಪೊಲೀಸರು ಅವರನ್ನು ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಪೊಲೀಸರು ಆರೋಪಿಗಳನ್ನು ಕೊಂಡೊಯ್ಯುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಜನರು ಆರೋಪಿಗಳಿಗೆ ಕಪಾಳಮೋಕ್ಷ ಮಾಡುವ ಮೂಲ ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ನಂತರ ಮಧ್ಯಪ್ರದೇಶದಲ್ಲಿ ಆರೋಪಿಗಳನ್ನು ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮತ್ತು ಸಾರ್ವಜನಿಕರು ಅವರಿಗೆ ಥಳಿಸುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಪೊಲೀಸರ ಪ್ರಕಾರ, ಮಹಿಳೆಯನ್ನು ಆಕೆಯ ಮಾಜಿ ಪ್ರೇಮಿ ಹಾಗೂ ಆತನ ಮೂವರು ಗೆಳೆಯರು ಶನಿವಾರದಂದು ಅತ್ಯಾಚಾರ ನಡೆಸಿದ್ದರು. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ಇತರ ದೂರಗಳನ್ನು ದಾಖಲಿಸಲಾಗಿದೆ.

 ಶನಿವಾರದಂದು ಮಹಿಳೆಯ ಮಾಜಿ ಪ್ರಿಯಕರ ಮುಖ್ಯವಾದ ವಿಷಯವನ್ನು ಹೇಳಲಿದೆ ಎಂಬ ಕಾರಣ ನೀಡಿ ಆಕೆಯನ್ನು ಹೊಟೇಲ್‌ಗೆ ಕರೆಸಿಕೊಂಡಿದ್ದ.  ಮಹಿಳೆ ಅಲ್ಲಿಗೆ ತಲುಪಿದಾಗ ಆಕೆಯ ಮೊಬೈಲ್ ಫೋನ್ ಕಸಿದುಕೊಂಡ ಆರೋಪಿ ಅದನ್ನು ವಾಪಸ್ ನೀಡಬೇಕೆಂದರೆ ತನ್ನ ಜೊತೆ ಗೆಳೆಯನ ಕೋಣೆಗೆ ಬರುವಂತೆ ಒತ್ತಾಯಿಸಿದ್ದಾನೆ. ಮಹಿಳೆಯು ಆರೋಪಿ ತಿಳಿಸಿದ ಜಾಗಕ್ಕೆ ತೆರಳಿದಾಗ ಅಲ್ಲಿ ಮೊದಲೇ ಬಂದು ಕುಳಿತಿದ್ದಾಕೆಯ ಮಾಜಿ ಗೆಳೆಯನ ಮೂವರು ಸ್ನೇಹಿತರು ಆಕೆಯನ್ನು ಹಿಡಿದು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಿಗಳ ಮುಷ್ಠಿಯಿಂದ ತಪ್ಪಿಸಿಕೊಂಡ ಮಹಿಳೆ ರವಿವಾರ ಬೆಳಿಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News