ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಕಾರು: ಉಮ್ರಾ ಯಾತ್ರೆಗೆ ಹೊರಟಿದ್ದ ತಾಯಿ, ಮಗು ಮೃತ್ಯು

Update: 2018-03-25 18:43 GMT

ಹಾಯಿಲ್, ಮಾ. 25: ಉಮ್ರಾ ಯಾತ್ರೆಗೆ ಹೊರಟಿದ್ದ ಎರಡು ಕುಟುಂಬಗಳು ಪ್ರಯಾಣಿಸುತ್ತಿದ್ದ ಕಾರು ಬ್ಯಾರಿಕೇಡ್‍ಗೆ ಢಿಕ್ಕಿಯಾಗಿ ಸಂಭವಿಸಿದ್ದ  ಅಪಘಾತದಲ್ಲಿ  ಮಹಿಳೆಯೊಬ್ಬರು  ಮೃತಪಟ್ಟಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯ ಮಗು ಕೂಡ ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಕಲ್ಲಿಕೋಟೆ ಕರಿವೆಂಬದ ನಿವಾಸಿ ಸಫೀನಾರ  ಮೂರುವರೆ ವರ್ಷದ  ಮಗು ಮುಹಮ್ಮದ್ ಶಹೀನ್ ಮದೀನದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.  ಅಪಘಾತದ ವೇಳೆ ಕಾರಿನಲ್ಲಿದ್ದ ಸಫೀನಾರ ಪತಿ ಅಬೂಬಕರ್ ಸಿದ್ದೀಕ್, ಪುತ್ರಿ ಫಾತಿಮಾ ಶೆರಿನ್ ಮತ್ತು ಕಾರಿನಲ್ಲಿದ್ದ  ರಂಶೀದ್ ಎಂಬವರ ಕುಟುಂಬ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದೆ.

ಗುರುವಾರ ರಾತ್ರಿ ಕಾರಿನಲ್ಲಿ ಅಬೂಬಕರ್ ಸಿದ್ದೀಕ್ ಮತ್ತು ರಂಶೀದ್‍ರ  ಕುಟುಂಬ ಹಾಯಿಲ್‍ನಿಂದ  ಉಮ್ರ ಯಾತ್ರೆಗೆ  ಹೊರಟಿತ್ತು. ಶುಕ್ರವಾರ ಬೆಳಗ್ಗಿನ ನಮಾಝ್ ಮಾಡಿದ ಬಳಿಕ ಮಕ್ಕಕ್ಕೆ ಪ್ರಯಾಣ ಮುಂದುವರಿಸಿದ್ದು, ಮದೀನದಿಂದ 175 ಕಿಲೊಮೀಟರ್ ದೂರದ ಅಲ್ ಹಂನದಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಬ್ಯಾರಿಕೇಡ್‍ಗೆ ಢಿಕ್ಕಿ ಹೊಡೆಯಿತು. ಅಪಘಾತದಲ್ಲಿ ಸಿದ್ದೀಕ್‍ರ ಪತ್ನಿ ಸಫೀನಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ  ಪುತ್ರ ಮುಹ್ಮದ್ ಶಹೀನ್‍ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News