ಚಿಪ್ಕೊ ಚಳವಳಿಯ 45ನೆ ವರ್ಷಾಚರಣೆ: ಗೂಗಲ್ ಗೌರವ ಸಲ್ಲಿಸಿದ್ದು ಹೀಗೆ…

Update: 2018-03-26 06:46 GMT

ಹೊಸದಿಲ್ಲಿ, ಮಾ.26: ಅರಣ್ಯ ಸಂರಕ್ಷಣಾ ಚಳವಳಿಯಾದ ಚಿಪ್ಕೊ ಚಳವಳಿಯ 45ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗೂಗಲ್ ತನ್ನ ಡೂಡಲ್ ಮೂಲಕ ಗೌರವಿಸಿದೆ.

ಅರಣ್ಯ ನಾಶದ ವಿರುದ್ಧ ಜನಜಾಗೃತಿ ಮೂಡಿಸುವುದು ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಅಣೆಕಟ್ಟು, ಉದ್ಯಮ ಹಾಗೂ ರಸ್ತೆಗಳಿಗಾಗಿ ದೊಡ್ಡ ಪ್ರಮಾಣದ ಅರಣ್ಯ ನಾಶವಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಈ ಚಳವಳಿ ಆರಂಭಿಸಲಾಗಿತ್ತು. ಈ ಚಳವಳಿ 1973ರಲ್ಲಿ ಉತ್ತರ ಪ್ರದೇಶದಿಂದ ಆರಂಭವಾಗಿತ್ತು. ಖ್ಯಾತ ಪರಿಸರವಾದಿ ಸುಂದರ್‍ಲಾಲ್ ಬಹುಗುಣ ಇದರ ನೇತೃತ್ವ ವಹಿಸಿದ್ದರು.

ಚಿಪ್ಕೊ ಎಂದರೆ ಹಿಂದಿಯಲ್ಲಿ ಬಲವಾಗಿ ನಿಲ್ಲು (ನಿಲುವಿಗೆ ಅಂಟಿಕೊಳ್ಳು) ಎಂಬ ಅರ್ಥ. ಜನ ಪರಸ್ಪರ ಕೈಜೋಡಿಸಿ ಮರಗಳನ್ನು ಸುತ್ತುವರಿದು ರಕ್ಷಣೆ ಒದಗಿಸುವ ಬದ್ಧತೆಯನ್ನು ಪ್ರದರ್ಶಿಸಿದರು. ಮರ ಕಡಿಯುವುದನ್ನು ತಪ್ಪಿಸುವ ಸಲುವಾಗಿ ಮರದ ಸುತ್ತ ಮಾನವ ಕೋಟೆ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News