ಮೈಸೂರು: ನಿವೇಶನದಾರರಿಗೆ ಮಂಜೂರಾತಿ ಪತ್ರ ವಿತರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2018-03-26 16:52 GMT

ಮೈಸೂರು,ಮಾ.26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಲಿತಾದ್ರಿನಗರ (ಉತ್ತರ) ಬಡಾವಣೆಯಲ್ಲಿ ನಿವೇಶನ ಮಂಜೂರಾಗಿರುವವರಿಗೆ ಮುಡಾ ಆವರಣದಲ್ಲಿ ಸೋಮವಾರ ಸಚಿವ ಡಾ.ಎಚ್.ಸಿ.ಮಹದೇವಪ್ಪ 530 ಮಧ್ಯಂತರ ನಿವೇಶನಗಳ ಮಂಜೂರಾತಿ ಪತ್ರ ವಿತರಿಸಿದರು.

ಲಲಿತಾದ್ರಿನಗರ (ಉತ್ತರ) ಬಡಾವಣೆಯಲ್ಲಿ 820 ನಿವೇಶನಗಳನ್ನು ರಚಿಸಿದ್ದು, ವಿವಿಧ ಅಳತೆ 125+, ಮೂಲೆ ನಿವೇಶನ 165 ಗಳನ್ನು ಹೊರತುಪಡಿಸಿ ಉಳಿಕೆ 530 ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.

ಬಡಾವಣೆಯಲ್ಲಿ ಹಂಚಿಕೆ ಮಾಡಿದ ಮಧ್ಯಂತರ ನಿವೇಶನಗಳ ವಿವರ:

69 ಅಳತೆಯ ನಿವೇಶನದಲ್ಲಿ 125 ಮಂದಿಗೆ, 9*12 ಅಳತೆಯ ನಿವೇಶನದಲ್ಲಿ 300 ಮಂದಿಗೆ, 12*18 ಅಳತೆಯ ನಿವೇಶನದಲ್ಲಿ 70 ಮಂದಿಗೆ, 15*24 ಅಳತೆಯ ನಿವೇಶನದಲ್ಲಿ 35 ಮಂದಿಗೆ ನಿವೇಶನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಇತರೆ ಹಿಂದುಳಿದ ವರ್ಗಗಳಿಗೆ 69 ನಿವೇಶನ, ಅನುಸೂಚಿತ ಬುಡಕಟ್ಟುಗಳಿಗೆ 69, ಅನುಸೂಚಿತ ಜಾತಿಗಳಿಗೆ , ಮಾಜಿ ಸೈನಿಕರಿಗೆ, ರಾಜ್ಯ ಸಕರಕಾರಿ ನೌಕರರಿಗೆ, ಕೇಂದ್ರ ಸರಕಾರಿ ನೌಕರರಿಗೆ ಹಂಚಿಕೆ ಮಾಡಲಾಯಿತು.

ಲಲಿತಾದ್ರಿನಗರ (ಉತ್ತರ) ಬಡಾವಣೆ ನಿರ್ಮಿಸಿರುವ ಒಟ್ಟು ವಿಸ್ತೀರ್ಣ 145 ಎಕರೆಯಾಗಿದ್ದು, ಇಂದು ಹಂಚಿಕೆ ಮಾಡಿದ ನಿವೇಶನಗಳು 530 ಆಗಿದೆ. ಒಟ್ಟು 31,251 ಅರ್ಜಿಗಳು ಬಂದಿದ್ದು, 2018ರ ಜ.6 ರಂದು ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿತ್ತು. ಫೆ.1 ರಂದು ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿತ್ತು.

ನಂತರ ಕನ್ನೇಗೌಡ ಸ್ಟೇಡಿಯಂನಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಬ್ಯಾಸ್ಕೆಟ್ ಬಾಲ್ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೆ.ಜಿ.ಕೊಪ್ಪಲಿನಲ್ಲಿ ನೂತನವಾಗಿ 4.4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಗ್ಯಾಸ್ ಚಿತಾಗಾರವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಆಯುಕ್ತ ಕಾಂತರಾಜು ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News