ಜೆಎಜಿಯಲ್ಲಿ ವಿವಾಹಿತರ ನೇಮಕ ದುಬಾರಿಯಾಗುತ್ತದೆ: ದಿಲ್ಲಿ ಹೈಕೋರ್ಟ್‌ನಲ್ಲಿ ಕೇಂದ್ರದ ನಿವೇದನೆ

Update: 2018-03-27 15:26 GMT

ಹೊಸದಿಲ್ಲಿ,ಮಾ.27: ಭಾರತೀಯ ಸೇನೆಯ ಕಾನೂನು ವಿಭಾಗವಾದ ‘ಜಡ್ಜ್ ಅಡ್ವೋಕೇಟ್ ಜನರಲ್(ಜೆಎಜಿ)’ನಲ್ಲಿ ವಿವಾಹಿತ ಪುರುಷರು ಮತ್ತು ಸ್ತ್ರೀಯರ ನೇಮಕಾತಿಯು ದುಬಾರಿಯಾಗುತ್ತದೆ. ಇಂತಹವರು ತಮ್ಮ ವೈವಾಹಿಕ ಬಾಧ್ಯತೆಗಳಿಂದಾಗಿ ತರಬೇತಿಗೆ ಗೈರುಹಾಜರಾದರೆ ಅವರಿಗೆ ಬದಲಿ ಅಭ್ಯರ್ಥಿಗಳನ್ನು ಹುಡುಕುವುದು ಭಾರೀ ವೆಚ್ಚದಾಯಕವಾಗುತ್ತದೆ ಎಂದು ಕೇಂದ್ರವು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ವಿವಾಹಿತ ಮಹಿಳೆಯರನ್ನು ಜೆಎಜಿಗೆ ನೇಮಕ ಮಾಡಿಕೊಳ್ಳದಿರುವ ಮೂಲಕ ಅವರ ವಿರುದ್ಧ ‘ಸಾಂಸ್ಥಿಕ ತಾರತಮ್ಯ’ವನ್ನು ಎಸಗಲಾಗುತ್ತಿದೆ ಎಂದು ಆರೋಪಿಸಿ ನ್ಯಾಯವಾದಿ ಕುಶ ಕಾಲ್ರಾ ಅವರು ಮೇ,2016ಲ್ಲಿ ದಾಖಲಿಸಿ ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಪೀಠದೆದುರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೇಂದ್ರವು ಈ ವಿಷಯವನ್ನು ನಿವೇದಿಸಿಕೊಂಡಿದೆ.

ಕಾಲ್ರಾ ಅರ್ಜಿಯನ್ನು ಸಲ್ಲಿಸಿದ ಬಳಿಕ 2017, ಆಗಸ್ಟ್‌ನಲ್ಲಿ ತಿದ್ದುಪಡಿಯೊಂದನ್ನು ಹೊರಡಿಸಿದ್ದ ಸೇನೆಯು, ಜೆಎಜಿ ಸೇವೆಗೆ ವಿವಾಹಿತ ಪುರುಷರ ನೇಮಕವನ್ನೂ ನಿಷೇಧಿಸಲಾಗಿದೆ ಎಂದು ತಿಳಿಸಿತ್ತು.

ಪಿಐಎಲ್ ಸಲ್ಲಿಕೆಯಾಗುವವರೆಗೆ ವಿವಾಹಿತ ಪುರುಷರನ್ನು ಜೆಎಜಿಗೆ ಏಕೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು ಎಂಬ ಕುರಿತು, ತನ್ನ ನೇಮಕಾತಿ ನಿಯಮಗಳು 1960-70ರ ಕಾಲದ್ದಾಗಿವೆ. ಆಗ ಯುವಕರು ಬೇಗನೆ ಮದುವೆ ಮಾಡಿಕೊಳ್ಳುತ್ತಿದ್ದರು ಮತ್ತು ಅವರು ಅರ್ಜಿ ಸಲ್ಲಿಸುವುದನ್ನು ತಡೆದರೆ ಅರ್ಹ ಅಭ್ಯರ್ಥಿಗಳ ಸಂಖ್ಯೆ ಅರ್ಧಕ್ಕೆ ಇಳಿಯುತ್ತಿತ್ತು ಎಂಬ ವಿವರಣೆ ಸೇನೆಯದ್ದಾ ಗಿದೆ.

ಇದನ್ನು ತನ್ನ ಪ್ರಮಾಣತ್ರದಲ್ಲಿ ಉಲ್ಲೇಖಿಸಿರುವ ಕೇಂದ್ರವು, ಕಾಲಕ್ರಮೇಣ ಸಾಮಾಜಿಕ-ಆರ್ಥಿಕ ವಾಸ್ತವಗಳು ಬದಲಾವಣೆ ಗೊಂಡು ಮತ್ತು ಮದುವೆಯಾಗುವ ಮುನ್ನ ವೃತ್ತಿಯೊಂದನ್ನು ಹೊಂದಬೇಕೆಂದು ಸ್ತ್ರೀ-ಪುರುಷರು ಇಚ್ಛಿಸತೊಡಗಿದಾಗ 1992 ರಿಂದ ಸೇನೆಯಲ್ಲಿ ಮಹಿಳೆಯರ ನೇಮಕಾತಿಯನ್ನು ಆರಂಭಿಸ ಲಾಗಿತ್ತು ಎಂದು ಪ್ರಮಾಣಪತ್ರದಲ್ಲಿ ತಿಳಿಸಿದೆ.

ಹೀಗಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಕೊರತೆಯುಂಟಾಗಿಲ್ಲ ಎಂದಿರುವ ಅದು, ಸೇನೆಯಲ್ಲಿ ನೇಮಕಗೊಂಡ ಬಳಿಕ ಪುರುಷ ಮತ್ತು ಮಹಿಳಾ ಅಧಿಕಾರಿಗಳು ಮದುವೆಯಾಗಲು ನಿಷೇಧ ವಿಲ್ಲ. ತರಬೇತಿ ಅವಧಿ ಮತ್ತು ಸೇವೆಯ ಮೊದಲ ವರ್ಷದಲ್ಲಿ ಮಾತ್ರ ನಿಷೇಧ ಅಸ್ತಿತ್ವಲ್ಲಿದೆ ಎಂದಿದೆ. 25 ವರ್ಷದೊಳಗಿನ ಅಧಿಕಾರಿಗಳು ಕುಟುಂಬ ವಸತಿಯನ್ನು ಪಡೆಯಲು ಅನರ್ಹ ರಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಅದು ಬೆಟ್ಟು ಮಾಡಿದೆ.

ಮೇ 21ರಂದು ಅರ್ಜಿಯು ವಿಚಾರಣೆಗೆ ಬರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News