ವಿಮಾನದಲ್ಲಿ ಲೈಂಗಿಕ ಕಿರುಕುಳ: 62 ವರ್ಷದ ವ್ಯಕ್ತಿಯ ಬಂಧನ

Update: 2018-03-28 17:28 GMT

ಹೊಸದಿಲ್ಲಿ, ಮಾ. 28: ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ‘ಏರ್ ವಿಸ್ತಾರಾ’ದಲ್ಲಿ ದಿಲ್ಲಿಗೆ ಪ್ರಯಾಣಿಸುತ್ತಿದ್ದ 62 ವರ್ಷದ ಪುಣೆ ನಿವಾಸಿಯನ್ನು ಬಂಧಿಸಲಾಗಿದೆ.

ಗಗನ ಸಖಿ ಪ್ರಥಮ ಮಾಹಿತಿ ವರದಿ ದಾಖಲಿಸಿದ ಬಳಿಕ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಯಾಣಿಕರು ಕಿರುಕುಳ ಅಥವಾ ಅಶಿಸ್ತಿನ ವರ್ತನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಮಾನ ಯಾನ ಕಂಪೆನಿ ‘ಏರ್ ವಿಸ್ತಾರಾ’ ಹೇಳಿದೆ.

 ವಿಮಾನದಲ್ಲಿ ಇತ್ತೀಚೆಗೆ ರಾಜೀವ್ ವಸಂತ್ ದಾನಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಲಕ್ನೋದಿಂದ ದಿಲ್ಲಿಗೆ ಸಂಚರಿಸುವ ‘ಏರ್ ವಿಸ್ತಾರಾ’ದ ಗಗನ ಸಖಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News