ತುಮಕೂರು; ಜೂಜು ಅಡ್ಡೆ ಮೇಲೆ ದಾಳಿ : ಪಾಲಿಕೆ ಸದಸ್ಯ ಬಂಧನ

Update: 2018-03-31 15:36 GMT
ಪ್ರದೀಪ್‌ ಪೂಜಾರಿ, ದಿನೇಶ್‌, ಶಿವಪ್ರಸಾದ್‌ 

ತುಮಕೂರು,ಮಾ.31: ಜೂಜು ಅಡ್ಡೆ ಮೇಲೆ ಜಿಲ್ಲಾ ಅಪರಾಧ ಪತ್ತೆ ದಳದಿಂದ ದಾಳಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಸೇರಿದಂತೆ 6 ಮಮದಿಯನ್ನು ಬಂಧಿಸಿದ್ದು, ಸದ್ಯ ಪಾಲಿಕೆ ಸದಸ್ಯ ಜೈಲು ಸೇರಿದ್ದಾರೆ.

ಕ್ಯಾತ್ಸಂದ್ರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ದೇವರಾಯ ಪಟ್ಟಣದಲ್ಲಿ ಕುಂಬಯ್ಯ ಎಂಬವರ ಹೋಟೆಲ್ ಮೇಲೆ ಇರುವ ಮನೆಯಲ್ಲಿ ಇಸ್ಪೀಟ್ ಅಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ  ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ದಿವ್ಯ ಗೋಪಿನಾಥ್ ಸೂಚನೆಯಂತೆ ಜಿಲ್ಲಾ ಅಪರಾಧ ಪತ್ತೆ ದಳದ ಇನ್‍ಸ್ಪೆಕ್ಟರ್ ಕೆ.ರಾಘವೇಂದ್ರ ಇತರ ವಿಶೇಷ ತಂಡ ರಚಿಸಿಕೊಂಡು ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ.  

ವಿಶೇಷ ತಂಡದ ಇನ್‍ಸ್ಪೆಕ್ಟರ್ ಕೆ.ರಾಘವೇಂದ್ರ , ಸಬ್ ಇನ್ ಸ್ಪೆಕ್ಟರ್ ವಿಜಯಲಕ್ಷೀ, ಸಿಬ್ಬಂದಿಗಳಾದ ಆಯೂಬ್ ಜಾನ್, ಮಂಜುನಾಥ್, ಪರಮೇಶ್ ಸೇರಿದಂತೆ ಇತರರು ಮಾರು ವೇಶದಲ್ಲಿ ಹೋಟೆಲ್‍ಗೆ ಹೋಗಿ ದಿಡೀರ್ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದು ಕೂಂಡಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯ ಜೆಡಿಎಸ್ ಪಕ್ಷದ ಸದಸ್ಯರಾದ ಲೋಕೇಶ್, ರಾಜು, ಸಂತೋಷ, ವೆಂಕಟೇಶ್, ವೆಂಕಟೇಶ್, ಚಿದಾನಂದ ಇವರನ್ನು ವಶಕ್ಕೆ ಪಡೆದುಕೊಂಡು ಪಣಕ್ಕೆ ಇಟ್ಟಿದ್ದ 36 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡು 6 ಮೊಬೈಲ್,4 ಬೈಕ್‍ಗಳನ್ನು ವಶಕ್ಕೆ ಪಡೆದು ಕ್ಯಾತ್ಸಂದ್ರ ಪೊಲೀಸರ ವಶಕ್ಕೆ ನೀಡಲಾಗಿದೆ.

ಜೈಲು ಸೇರಿದ ಪಾಲಿಕೆ ಸದಸ್ಯ
ಲೋಕೇಶ್ ಹಾಗೂ ಸಹಚರರ ಮೇಲೆ ಕ್ಯಾತ್ಸಂದ್ರ ಪೊಲಿಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ರಾಜು ಪ್ರಕರಣ ದಾಖಲಿಸಿಕೊಂಡು ಜೂಜುಕೋರರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಂಗ ಬಂಧನಕ್ಕೆ ಅದೇಶಸಿದ್ದಾರೆ. ಹೊರಗಡೆ ಜೂಜು ನೆಡೆಯುವುದಕ್ಕೂ ಮನೆಯಲ್ಲಿ ಜೂಜು ನೆಡೆಯುವದಕ್ಕೂ ವ್ಯತ್ಯಾಸ ಇದೆ. ಹೌಸ್‍ನಲ್ಲಿ ಜೂಜಾಡಿದರೆ ಜೈಲಿಗೆ ಕಳುಹಿಸಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಅಪರಾಧ ಪತ್ತೆ ದಳದ ಕಾರ್ಯ ವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News