ಹನೂರು: ಜೆಡಿಎಸ್ ನಿಂದ ಲೋಕೇಶ್‍ ಮೌರ್ಯ ಗೆ ಟಿಕೆಟ್‍ ನೀಡಲು ಒತ್ತಾಯ

Update: 2018-04-06 15:46 GMT

ಹನೂರು,ಎ.06: ಹನೂರು ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರ ಮೂಲಕ ಜೆಡಿಎಸ್‍ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದ ಪ್ರಬಲ ಆಕಾಂಕ್ಷಿಯಾಗಿರುವ ಲೋಕೇಶ್‍ ಮೌರ್ಯ ಅವರಿಗೆ ಟಿಕೆಟ್‍ ನೀಡುವಂತೆ ಶುಕ್ರವಾರ ಹನೂರಿನಲ್ಲಿ ಜೆಡಿಎಸ್‍ನ ಕಾರ್ಯಕರ್ತರು ಒತ್ತಾಯಿಸಿದರು.

ಹನೂರು ಕ್ಷೇತ್ರದಿಂದ ಲೋಕೇಶ್‍ ಮೌರ್ಯ ಅವರಿಗೆ ಜೆಡಿಎಸ್‍ ನಿಂದ ಟಿಕೆಟ್‍ ಕೈತಪ್ಪಿದ ಹಿನ್ನಲೆಯಲ್ಲಿ ಶುಕ್ರವಾರ ನೂರಾರು ಕಾರ್ಯಕರ್ತರು ಪಟ್ಟಣದ ಜೆಡಿಎಸ್‍ ಕಚೇರಿ ಮುಂಭಾಗದಲ್ಲಿ ಟಿಕೆಟ್‍ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಮಾತನಾಡಿ, ಕಳೆದ ಒಂದೂವರೆ ವರ್ಷದ ಹಿಂದೆ ಹನೂರು ಕ್ಷೇತ್ರದಲ್ಲಿ ಬರಗಾಲ ತಲೆದೂರಿದ್ದ ವೇಳೆ ಇಲ್ಲಿನ ಶಾಸಕರು ನಿರ್ಲಕ್ಷ್ಯ ವಹಿಸಿದ್ದರು.ಈ ವೇಳೆ ಕ್ಷೇತ್ರದಲ್ಲಿ ಜೆಡಿಎಸ್‍ ಸಂಪೂರ್ಣ ನೆಲ ಕಚ್ಚಿತ್ತು. ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಲೋಕೇಶ್‍ ಮೌರ್ಯ ಅವರು ಕ್ಷೇತ್ರದಲ್ಲಿ ಸಂಚರಿಸುವುದರ ಮೂಲಕ ಸಮಸ್ಯೆಯ ಬಗ್ಗೆ ಗಮನಹರಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದರು.ತದ ನಂತರದಲ್ಲಿ ಈ ಭಾಗದಲ್ಲಿ ಬಡಕುಟುಂಬಗಳಿಗೆ, ಕಾಡಂಚಿನ ಕುಟುಂಬಗಳಿಗೆ ಉಚಿತ ವಿದ್ಯುತ್‍ ವ್ಯವಸ್ಥೆ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ದೇಗುಲಗಳಿಗೆ ಹಾಗೂ ಮೃತಕು ಟುಂಬಗಳಿಗೆ ಧನ ಸಹಾಯ ಸೇರಿದಂತೆ ಇನ್ನಿತರ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರ ಮೂಲಕ ಜೆಡಿಎಸ್‍ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು, 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಪ್ರಚಾರದಲ್ಲಿ ತೊಡಗಿದ್ದರು.

ಬಳಿಕ ಪಕ್ಷದ ವರಿಷ್ಠರು ಹನೂರು ಕ್ಷೇತ್ರದಿಂದ ಟಿಕೆಟ್‍ ನೀಡುವುದಾಗಿ ಭರವಸೆ ನೀಡಿದ್ದರು.ಈ ದಿಸೆಯಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಹೆಚ್ಚಿನ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಲೋಕೇಶ್‍ಮೌರ್ಯ ಅವರಿಗೆ ಟಿಕೆಟ್‍ ಕೈತಪ್ಪಿದೆ ಎನ್ನಲಾಗಿದ್ದು, ಪಕ್ಷದ ವರಿಷ್ಠರು ಇತರರಿಗೆ ಟಿಕೆಟ್‍ ನೀಡಲು ನಿರ್ಧರಿಸಿದ್ದಾರೆ. ಇದರಿಂದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಆದುದರಿಂದ ಪಕ್ಷದಿಂದ ಲೋಕೇಶ್ ಮೌರ್ಯ ಅವರನ್ನು ಬಿಟ್ಟು ಬೇರೆಯಾರಿಗೆ ಟಿಕೆಟ್‍ ನೀಡಿದರೂ ಸೋಲುವುದು ಖಚಿತ. ಆದುದರಿಂದ ಲೋಕೇಶ್‍ಮೌರ್ಯ ಅವರಿಗೆ ಟಿಕೆಟ್‍ ನೀಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಬೈಲೂರು ಗ್ರಾಪಂ ಅಧ್ಯಕ್ಷ ಕೆಂಪರಾಜು, ಮುಖಂಡರಾದ ನಾಗೇಂದ್ರಮೂರ್ತಿ, ಮಹೇಶ್, ಬಸವರಾಜು, ಆಲುಮಲೆ, ರುಕ್ಮಿಣಿ, ಶಿವಮ್ಮ, ಮಮತಾ ಹಾಗೂ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News