ಹನೂರು: ಶ್ರೀಶ್ರೀ ಸಿದ್ದರಾಮೇಶ್ವರ 846ನೇ ಜಯಂತ್ಸೋಸವದ ಕಾರ್ಯಕ್ರಮ ಮತ್ತು ಗುರುವಂದಾನಾ ಕಾರ್ಯಕ್ರಮ

Update: 2018-04-08 16:12 GMT

ಹನೂರು,ಎ.8: ಭೋವಿ ಜನಾಂಗದವರು ಅಸಂಘಟಿತರು ಎಂಬ ಉದ್ದೇಶದಿಂದ ರಾಜಕೀಯ ಪಕ್ಷಗಳು ರಾಜಕೀಯವಾಗಿ ಮತ್ತು ಸಮಾಜಿಕವಾಗಿ ಮುಖ್ಯವಾಹಿನಿಗೆ ತರುವುದಕ್ಕೆ ಮುಂದಾಗುತ್ತಿಲ್ಲ ನಮ್ಮ ಸಮುದಾಯ ಸಂಘಟಿತರಾಗಿ ಒಗ್ಗಾಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು  ಅಖಲ ಕರ್ನಾಟಕ ಭೋವಿ ಜನಾಂಗದ ರಾಜ್ಯದ್ಯಕ್ಷರಾದ ಶ್ರೀ ವೈ ಕೋಟ್ರೇಸ್ ತಿಳಿಸಿದರು 

ಹನೂರು ತಾಲ್ಲೂಕಿನ ವಡ್ಡರದೊಡ್ಡಿ (ದೊಮ್ಮನಗದ್ದೆ) ಶ್ರೀಶ್ರೀ ಸಿದ್ದರಾಮೇಶ್ವರ 846ನೇ  ಜಯಂತ್ಸೋಸವದ ಕಾರ್ಯಕ್ರಮ ಮತ್ತು ಗುರುವಂದಾನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅನಂತರ ಮಾತನಾಡಿದ ಅವರು ಈಗಾಗಲೇ ನಮ್ಮ ದೇಶದ ರಾಜಧಾನಿ ನವ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸುಮಾರು 5ಲಕ್ಷ ಜನರನ್ನು ಸೇರಿಸಿ ಭೋವಿ ಓಡ್ ಬೃಹತ್ ಸಮಾವೇಶ ನೆಡಿಸಿ ನಮ್ಮ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಿದ್ದೇವೆ. ಕರ್ನಾಟಕದಲ್ಲಿ ಸುಮಾರು 40 ಲಕ್ಷ ಮಂದಿ ನಮ್ಮ ಜನಾಂಗದವರು ಇದ್ದು ಆದರೂ ಸಹ ನಮ್ಮ ರಾಜಕೀಯ ಪಕ್ಷಗಳು ನಮ್ಮ ಜನಾಂಗದವರು ಅಸಂಘಟಿತರು ಎಂಬ ಕುಂಟು ನೆಪ ಹೇಳಿಕೂಂಡು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ ಮಾಡುತ್ತಿಲ್ಲ  ಮತ್ತು ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು .

ನಂತರ ಮಾತನಾಡಿದ ಶ್ರೀ ಹಿಮ್ಮಡಿ ಸಿದ್ದರಾಮೇಶ್ವರಸ್ವಾಮಿಗಳು ತಮ್ಮ ಆರ್ಶೀವಚನದ ಮುಖಾಂತರ ಸಮುದಾಯದವರು ಒಗ್ಗಾಟ್ಟಾಗಿ ಸಂಘಟಿತರಾಗಬೇಕು, ದುಷ್ಚಟಗಳಿಗೆ ದಾಸರಾಗದೇ ಉತ್ತಮ ಬದುಕನ್ನು ಕಟ್ಟಿಕೂಳ್ಳಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತನ್ನಿ  ಸಮಾಜದ ಏಳಿಗೆಗೆ ಶ್ರಮಿಸಿ ಮತ್ತು ಸುಪ್ರೀಂಕೂರ್ಟ್ ಆದೇಶದಂತೆ ಭೋವಿ, ವಡ್ಡ ಮೊದಲಾದ ಹೆಸರುಗಳು ಬೋವಿ ಜನಾಂಗಕ್ಕೆ ಸಂಬಂದಿಸಿದಾಗಿದೆ, ಒಡ್ಡು ಕೂಟ್ಟಲು ನಮ್ಮ ಜನಾಂಗ ಹೆಚ್ಚಾಗಿ ತೊಡಗಿಸಿಕೂಳ್ಳುತ್ತಿರುವುದರಿಂದ ಎನ್ನುವ ಹೆಸರು ಬಂದಿದೆ .ವಡ್ಡ ಎನ್ನುವ ಪದ ಅಳಿಸಿ ಭೋವಿ ಎಂಬ ಪದ ಬಳಸಬೇಕಾಗಿದೆ ಎಂದು ಹೇಳಿದರು 

ಈ ಕಾರ್ಯಕ್ರಮಕ್ಕೂ ಮುನ್ನ ರಾಮಪುರ ಗ್ರಾಮದಿಂದ ಶ್ರೀ ಹಿಮ್ಮಡಿ ಸಿದ್ದರಾಮೇಶ್ವರಸ್ವಾಮಿಜಿಯವರನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ, ಗ್ರಾಮದ ನೂರಾರು ಮಹಿಳೆಯರು ಕುಂಭಮೇಳವನ್ನು ಎತ್ತಿಕೂಂಡು ಸಾಲಾಗಿ ಸಾಗಿ ವಿವಧ ಕಲಾ ತಂಡಗಳೂಂದಿಗೆ ಮೆರವಣಿಗೆಯಲ್ಲಿ ಅವರನ್ನು ಗ್ರಾಮಕ್ಕೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಭೋವಿ ಜನಾಂಗದ ಮಹೇಶ್‍ಕುಮಾರ್ ಮೈಸೂರು ಜಿಲ್ಲಾಸಂಘಟನಾ ಕಾರ್ಯದರ್ಶಿ, ಮಣಿ, ರಾಜ್ಯ ಕಾರ್ಯದರ್ಶಿ, ಕೃಷ್ಣ ಚಿಕ್ಕಮಂಗಳೂರು ಜಿಲ್ಲಾ ಅದ್ಯಕ್ಷರು ,ರಾಜಣ್ಣ ಜಿಲ್ಲಾ ಅದ್ಯಕ್ಷರು ಚಾಮರಾಜನಗರ ,ಎಸ್.ಆರ್ ಮಹದೇವ್, ಗ್ರಾಮ ಸದಸ್ಯ ಕಾಳಿಯಪ್ಪ, ಹನೂರು ವಿಷ್ಣು, ಗ್ರಾಮ ಘಟಕ ಅದ್ಯಕ್ಷರಾದ ಗೋವಿಂದ, ಉಪಾದ್ಯಕ್ಷ  ಶಿವಲಿಂಗ, ರವಿಚಂದ್ರ, ಶಿವುಕುಮಾರ್, ಶಶಿಕುಮಾರ್ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News