ಸಿದ್ಧಾರ್ಥ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಸಿಎಂ ಯಡಿಯೂರಪ್ಪ

Update: 2019-07-31 05:32 GMT

ಬೆಂಗಳೂರು, ಜು.31: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ ಹಾಗೂ 'ಕೆಫೆ ಕಾಫಿ ಡೇ' ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಅವರ ನಿಧನ ತೀವ್ರ ಆಘಾತ ಹಾಗೂ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಗವಂತನು ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಟ್ವೀಟ್​ ಮಾಡಿದ್ದಾರೆ

ಎಸ್​ಎಂಕೆ ಮನೆಯವರಿಗೆ ಸಾಂತ್ವನ ಹೇಳೋದಕ್ಕೆ‌ ಶಬ್ದ ಸಿಗುತ್ತಿಲ್ಲ.   ಸಿದ್ಧಾರ್ಥ್  ಅವರ ಹುಟ್ಟೂರಲ್ಲಿ  ಅಂತ್ಯಕ್ರಿಯೆಗೆ ಸಿದ್ಧತೆ  ನಡೆಯುತ್ತಿದೆ. ಸಂಜೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ತಾನು ಭಾಗಿಯಾಗುವುದಾಗಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಆಗರ್ಭ ಶ್ರೀಮಂತ ಸಿದ್ದಾರ್ಥ್  ಆತ್ಮಹತ್ಯೆ ಮಾಡಿಕೊಂಡಿರೋದು ಗ್ರಹಚಾರ. ಸಾಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ.ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಧವಳಗಿರಿ ನಿವಾಸದ ಬಳಿ ಸಿಎಂ ಬಿಎಸ್​​ವೈ ಹೇಳಿಕೆ  ನೀಡಿದ್ದಾರೆ.

ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ : ಡಿವಿಎಸ್

ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ : ಹೆಚ್ ಡಿಕೆ

ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ಧಾರ್ಥ ಅವರ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ಧಾರ್ಥ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಸಹಸ್ರಾರು ನೌಕರರಿಗೆ ತಮ್ಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ  ಎಂದು  ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News