ಸ್ಟೆನೊಗ್ರಾಫರ್ ಪರೀಕ್ಷೆಗೆ ಹಿಂದಿ ಕಡ್ಡಾಯ

Update: 2019-09-28 18:36 GMT

ಬೆಂಗಳೂರು, ಸೆ.28: ಸ್ಟೆನೊಗ್ರಾಫರ್‌ಗಳ ನೇಮಕಕ್ಕೆ ಕೇಂದ್ರ ಸಿಬ್ಬಂದಿ ಆಯೋಗ ನಡೆಸುವ ಪರೀಕ್ಷೆಯಲ್ಲಿಯೂ ಹಿಂದಿ ಕಡ್ಡಾಯಗೊಳಿಸಲಾಗಿದೆ.

ಸಿ ಮತ್ತು ಡಿ ದರ್ಜೆ ಅಡಿಯ ಸೈನೊಗ್ರಾಫರ್‌ಗಳ ನೇಮಕ ಪರೀಕ್ಷೆ ಸಂಬಂಧ ಆಯೋಗ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆದರೆ, ಈ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಅಷ್ಟೇ ಬರೆಯಬಹುದಾಗಿದೆ.

ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವ ಕೇಂದ್ರದ ಅಧೀನ ಸಂಸ್ಥೆಗಳಿಗೂ ಈ ಪರೀಕ್ಷೆ ಮೂಲಕವೇ ಸಿ ಮತ್ತು ಡಿ ದರ್ಜೆ ನೌಕರರನ್ನು ಆಯ್ಕೆ ಮಾಡಲಾಗುತ್ತದೆ. ಹಿಂದಿ ಕಡ್ಡಾಯ ಮಾಡಿರುವುದರಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಇಲ್ಲಿಯೂ ಅನ್ಯಾಯವಾಗಲಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.

ಈ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೆ, ನೆಗೆಟಿವ್ ಅಂಕಗಳನ್ನೂ ನೀಡಲಾಗುತ್ತಿದೆ. ಇದರಿಂದ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಪಷ್ಟ ಹಿನ್ನೆಡೆಯಾಗುವ ಆತಂಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News