ಮಹಡಿಯಿಂದ ಬಿದ್ದು ಮೂರೂವರೆ ವರ್ಷದ ಮಗು ಸಾವು

Update: 2019-09-29 12:28 GMT

ಮಡಿಕೇರಿ, ಸೆ.29: ಕಟ್ಟಡದ ಎರಡನೇ ಮಹಡಿಯಿಂದ ಮೂರೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ಪಟ್ಟಣದ ಮಲಬಾರ್ ರಸ್ತೆಯ ಹೆಚ್.ಎಂ.ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ಅಝರುದ್ದೀನ್-ಝಾಹಿರಾ ದಂಪತಿಗಳ ಪುತ್ರ ಜವಾದುದ್ದೀನ್ ಮೃತ ಮಗು.

ಕಟ್ಟಡದ ಮೇಲೆ ಆಟವಾಡುತ್ತಿರುವಾಗ ಆಯತಪ್ಪಿ ಕಿಟಕಿಯ ಮೂಲಕ ಕೆಳಗೆ ಬಿದ್ದ ಮಗು ತೀವ್ರವಾಗಿ ಗಾಯಗೊಂಡಿತು. ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು. ತಂದೆ ಅಝರುದ್ದೀನ್ ದುಬೈನಲ್ಲಿ ಕೆಲಸದಲ್ಲಿದ್ದಾರೆ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News