ಆರೆ ಕಾಲನಿ ಅರಣ್ಯದಲ್ಲಿ ಸಾವಿರಾರು ಮರ ಮಾರಣಹೋಮ ಖಂಡಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Update: 2019-10-04 07:21 GMT

ಮುಂಬೈ, ಅ.4: ಆರೆ ಕಾಲನಿಯ ಅರಣ್ಯ ಉಳಿಸಿ ಹೋರಾಟಗಾರರಿಗೆ ಶುಕ್ರವಾರ ತೀವ್ರ ಹಿನ್ನಡೆಯಾಗಿದೆ. ಮುಂಬೈ ಮೆಟ್ರೊ ಡಿಪೋ ಸ್ಥಾಪನೆಗೆ 2,500ಕ್ಕೂ ಹೆಚ್ಚು ಮರಗಳ ಮಾರಣಹೋಮವನ್ನು ಖಂಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

  ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕೆ ಆರೆ ಅರಣ್ಯದಲ್ಲಿರುವ 2,700 ಮರಗಳನ್ನು ಕಡಿಯುವುದಕ್ಕೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಮೂರನೇ ಮೆಟ್ರೋ ಯೋಜನೆಗಾಗಿ ನಿರ್ಮಿಸುತ್ತಿರುವ ಡಿಪೋವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದರು.

ಆರೆ ಕಾಲನಿ 1,287 ಹೆಕ್ಟರ್‌ನಷ್ಟು ವಿಶಾಲವಾಗಿದ್ದು, ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದ್ದು, ಇದು ಮಹಾನಗರದ ಪ್ರಮುಖ ಹಸಿರುತಾಣವಾಗಿತ್ತು. ಆರೆ ಕಾಲನಿಯಲ್ಲಿರುವ ಮರದ ಮಾರಣಹೋಮ ಖಂಡಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಹಲವು ಬಾಲಿವುಡ್ ತಾರೆಯರು ಹಾಗೂ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸಿದ್ದರು.

ಆರೆ ಕಾಲನಿ ಹಸಿರು ಪ್ರದೇಶ ಹೊಂದಿದೆ ಎಂಬ ಕಾರಣಕ್ಕೆ ಅದನ್ನು ಅರಣ್ಯ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸೆ.20ರಂದು ಮಹಾರಾಷ್ಟ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News