ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಿದ್ದ ಹಂತಕಿ ಸೆರೆ

Update: 2019-10-07 05:19 GMT

ತಿರುವನಂತಪುರ, ಅ.7: ಕೋಝಿಕ್ಕೋಡ್ ನ ಕೊಡಾತ್ತೇಯಿ ಎಂಬಲ್ಲಿ  ಆಸ್ತಿ ಕಬಳಿಸಲು ಪತಿ  ಸೇರಿದಂತೆ ಒಂದೇ ಕುಟುಂಬದ 6 ಮಂದಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಸರಣಿ ಹಂತಕಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ  ಜೂಲಿ ಮತ್ತು ಆಕೆಯ ಎರಡನೇ ಗಂಡ ಶಾಜು ಹಾಗೂ ಇವರಿಗೆ  ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು  ಆರೋಪಿಗಳು  ಪೊಲೀಸರ  ಬಲೆಗೆ ಬಿದ್ದಿದ್ದಾರೆ

 2002ರಿಂದ 2016ರ ವರೆಗೆ ಈ ಕೊಲೆಗಳು ನಡೆದಿವೆ.

ಹಂತಕಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಜು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಇಬ್ಬರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರನ್ನು ಕೂಡ ಬಂಧಿಸಲಾಗಿದೆ.

ಅತ್ತೆ ಅಣ್ಣಮ್ಮ ಥಾಮಸ್ (57) , ಮಾವ ಟಾಮ್ ಥಾಮಸ್,  ಪತಿ ರಾಯ್ ಥಾಮಸ್, ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67)  , ಸಿಲಿ(27) ಆಕೆಯ  2 ಹರೆಯದ ಹೆಣ್ಣು ಮಗು  ಅಲ್ಫೋನ್ಸನನ್ನು  ಜೂಲಿ  ಎಂಬವರಿಗೆ ಸೈನೈಡ್ ನೀಡಿ  ಕೊಂದಿರುವುದಾಗಿ ಆರೋಪಿಸಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News