ಮುಂದೆ ಒಂದು ದಿನ ಶಿವ ಸೈನಿಕ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ: ಉದ್ಧವ್ ಠಾಕ್ರೆ

Update: 2019-10-07 12:19 GMT

ಮುಂಬೈ, ಅ.7: ಮಗ ಆದಿತ್ಯರ ಚುನಾವಣಾ ಆಖಾಡದಲ್ಲಿ ಧುಮುಕುವುದು ಎಂದರೆ ತಾನು ಸಕ್ರಿಯ ರಾಜಕಾರಣದಿಂದ ನಿರ್ಗಮನ ಹಾದಿಯಲ್ಲಿದ್ದೇನೆ ಎಂದು ಅರ್ಥವಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ತಮ್ಮ ಪಕ್ಷದ ಮುಖವಾಣಿಗೆ ನೀಡಿದ ಸಂದರ್ಶನದಲ್ಲಿ, ಉದ್ಧವ್ ಠಾಕ್ರೆ ಅವರು ಭಾರತೀಯ ಜನತಾ ಪಕ್ಷದೊಂದಿಗಿನ ಒಪ್ಪಂದದಲ್ಲಿ ತಮ್ಮ ಪಕ್ಷ ಮಾಡಿಕೊಂಡಿರುವ ಮೈತ್ರಿಯ  ಬಗ್ಗೆ ಮಾತನಾಡಿದರು ಆದರೆ ಹೊಸ ಸರ್ಕಾರದಲ್ಲಿ ಜವಾಬ್ದಾರಿಗಳ "ಸಮಾನ"  ಹಂಚಿಕೆಯನ್ನು ಸೇನಾ ನಿರೀಕ್ಷಿಸಿದೆ ಎಂದು ಒತ್ತಿ ಹೇಳಿದರು.

ವರ್ಲಿಯಿಂದ ಸ್ಪರ್ಧಿಸುತ್ತಿರುವ ಆದಿತ್ಯ ಮುಂದಿನ ಮುಖ್ಯಮಂತ್ರಿ ಅಥವಾ ಪಮುಖ್ಯಮಂತ್ರಿಯಾಗುವ ಗುರಿ ಹೊಂದಿಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು . ಠಾಕ್ರೆ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲಿ ಆದಿತ್ಯ ಠಾಕ್ರೆ ಮೊದಲಿಗರು. 1966 ರಲ್ಲಿ ಶಿವಸೇನೆ ಸ್ಥಾಪಿಸಿದ ಅವರ ಅಜ್ಜ ಬಾಲ್ ಠಾಕ್ರೆ ಅವರು ರಿಮೋಟ್ ಕಂಟ್ರೋಲ್ ಎಂದು ವಿವರಿಸುವ ಮೂಲಕ ಅಧಿಕಾರವನ್ನು ಚಲಾಯಿಸಲು ಆದ್ಯತೆ ನೀಡಿದರು.

“ಅವರು (ಆದಿತ್ಯ) ಸ್ಪರ್ಧಿಸುತ್ತಿದ್ದಾರೆ ಆದರೆ ಅವರು ತಕ್ಷಣ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಇದರ ಅರ್ಥವಲ್ಲ, ಅವರು ಕೆಲವು ಶಾಸಕರಾಗಿ ಅನುಭವವನ್ನು ಪಡೆಯಲು  ಬಯಸಿದ್ದಾರೆ. ಅವರು ಅದರಲ್ಲಿ ಆಸಕ್ತಿ ಹೊಂದಿದ್ದಾರೆ, ”ಎಂದು ಸೇನಾ ಮುಖ್ಯಸ್ಥರು ಹೇಳಿದರು.

"ಒಂದು ದಿನ, ಶಿವ ಸೈನಿಕ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ, ಇದು ನನ್ನ ತಂದೆ ಮತ್ತು ಸೇನಾ ಸಂಸ್ಥಾಪಕ ದಿವಂಗತ ಬಾಲಾಸಾಹೇಬರಿಗೆ ನಾನು ನೀಡಿದ ಭರವಸೆಯಾಗಿದೆ" ಎಂದು ಉದ್ಧವ್ ಠಾಕ್ರೆ ಹೇಳಿದರು.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಉದ್ಧವ್ ಠಾಕ್ರೆ ಅವರ ಅಭಿಪ್ರಾಯಕ್ಕೆ  ಕಿರುನಗೆಯಿಂದ ಪ್ರತಿಕ್ರಿಯಿಸಿದರು. ಮಾಧ್ಯಮಗೋಷ್ಠಿಯಲ್ಲಿ ಕೇಳಿದಾಗ, ಜಾವಡೇಕರ್ ಅವರು ಸೇನಾ ನಾಯಕ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ವಿಧಾನಸಭೆಯ 288 ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು  ಪಡೆಯಲು ಬಿಜೆಪಿಯೊಂದಿಗೆ ಮಾತುಕತೆ ಆರಂಭಿಸಿದ್ದ ಶಿವಸೇನೆ ಕೊನೆಗೆ  124 ಸ್ಥಾನಗಳಿಗೆ ಸ್ಪರ್ಧಿಸಲು ಮುಂದಾಗಿದೆ.150ಕ್ಷೇತ್ರಗಳಿ ಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.  ಉಳಿದ 14 ಕ್ಷೇತ್ರಗಳನ್ನು ಸಣ್ಣ ಮಿತ್ರಪಕ್ಷ ಗಳಿಗೆ ಬಿಟ್ಟುಕೊಡಲಿದೆ. ಉಪಮುಖ್ಯಮಂತ್ರಿಗಳ ಸ್ಥಾನವನ್ನು ನೀಡಲು ಬಿಜೆಪಿ ಭರವಸೆ ನೀಡಿದೆ ಎಂದು ಸೇನಾ ನಾಯಕರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News