ಆ್ಯಪಲ್ ಬಳಿ ಅತ್ಯಾಚಾರ ಆರೋಪಿ ಸೆಂಗಾರ್ ಲೊಕೇಶನ್ ಮಾಹಿತಿಯೇ ಇಲ್ಲ !
Update: 2019-10-10 03:55 GMT
ಹೊಸದಿಲ್ಲಿ: ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್, ಘಟನೆ ನಡೆದ ದಿನ ಎಲ್ಲಿದ್ದರು ಎಂಬ ಲೊಕೇಶನ್ ಮಾಹಿತಿ ವಿವರಗಳು ತನ್ನ ಬಳಿ ಇಲ್ಲ ಎಂದು ಆ್ಯಪಲ್ ಇನ್‍ಕಾರ್ಪೊರೇಷನ್ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಐಫೋನ್ ಬಳಸುತ್ತಿದ್ದ ಸೆಂಗಾರ್ ನ ಲೊಕೇಶನ್ ವಿವರಗಳು ಇಲ್ಲ ಎಂದು ಕಂಪನಿಯ ವಕೀಲರು ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರ ಮುಂದೆ ಹೇಳಿಕೆ ನೀಡಿದರು. ಅತ್ಯಾಚಾರ ನಡೆದಿದೆ ಎನ್ನಲಾದ ದಿನ ಆರೋಪಿ ಯಾವ ಸ್ಥಳದಲ್ಲಿದ್ದ ಎನ್ನುವುದನ್ನು ಪತ್ತೆ ಮಾಡಲು ಎರಡು ವಾರಗಳ ಒಳಗಾಗಿ ಲೊಕೇಶನ್ ವಿವರ ನೀಡುವಂತೆ ನ್ಯಾಯಾಲಯ ಸೆಪ್ಟೆಂಬರ್ 29ರಂದು ಸೂಚನೆ ನೀಡಿತ್ತು.