ಉತ್ತರಪ್ರದೇಶ: ಸಿಲಿಂಡರ್ ಸ್ಫೋಟದಿಂದ ಕುಸಿದು ಬಿದ್ದ ಕಟ್ಟಡ: 10 ಮಂದಿ ಸಾವು

Update: 2019-10-14 04:41 GMT

ವೌ(ಉತ್ತರಪ್ರದೇಶ), ಅ.14: ಸಿಲಿಂಡರ್ ಸ್ಫೋಟಗೊಂಡ ಬಳಿಕ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದು,ಹಲವರಿಗೆ ಗಾಯವಾಗಿರುವ ಘಟನೆಯು ಉತ್ತರ ಉತ್ತರಪ್ರದೇಶದ ವೌ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಇನ್ನೂ ಹಲವು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ವೌ ಜಿಲ್ಲೆಯ ಮೊಹಮ್ಮದಾಬಾದ್ ಪ್ರದೇಶದಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು.

ಸಿಲಿಂಡರ್ ಸ್ಫೋಟದ ರಭಸಕ್ಕೆ ಕಟ್ಟಡವೇ ಕುಸಿದುಬಿದ್ದಿದೆ. ನಮಗೆ ದೊಡ್ಡ ಶಬ್ದ ಕೇಳಿಸಿದ್ದು, ಬಳಿಕ ಕಟ್ಟಡದಲ್ಲಿ ಬೆಂಕಿ ಆವರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕುಸಿದು ಬಿದ್ದಿರುವ ಕಟ್ಟಡದ ಬಳಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು,ಅವಶೇಷಗಳಡಿ ಜನರು ಸಿಲುಕಿದ್ದಾರೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಸ್ಥಳದಲ್ಲಿ ಆ್ಯಂಬುಲೆನ್ಸ್ ಹಾಗೂ ಜನಸಂದಣಿ ನೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News