ಚುನಾವಣಾ ಪ್ರಚಾರದಲ್ಲಿ ಪಂಚೆ ಧರಿಸಿ ಮಿಂಚಿದ ಶಿವಸೇನೆಯ ಆದಿತ್ಯಠಾಕ್ರೆ

Update: 2019-10-14 09:29 GMT

ಮುಂಬೈ, ಅ.14: ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆ ಬಿಳಿ ಪಂಚೆ ಧರಿಸಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ತಮಿಳುನಾಡಿನ ಮಲ್ಲಪುರಂನಲ್ಲಿ ಸ್ವಾಗತ ನೀಡಿದ್ದರು. ಇದೀಗ ಪ್ರಧಾನಿ ಅವರನ್ನು ಅನುಸರಿಸಿರುವ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಮುಂಬೈನ ವರ್ಲಿಯಲ್ಲಿ ರವಿವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಬಿಳಿ ಪಂಚೆ ಧರಿಸಿ ಮಿಂಚಿದರು.

ಆದಿತ್ಯ ಠಾಕ್ರೆ ವರ್ಲಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿಯ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರು ಠಾಕ್ರೆ ಕುಟುಂಬದಿಂದ ಚುನಾವಣೆಗೆ ನಿಲ್ಲುತ್ತಿರುವ ಮೊದಲಿಗರಾಗಿದ್ದಾರೆ.

ವರ್ಲಿ ಪರಿಸರದಲ್ಲಿ ನೆಲೆಸಿರುವ ನಿವಾಸಿಗಳು ಆದಿತ್ಯ ಠಾಕ್ರೆಗೆ ಬಿಳಿ ಪಂಚೆಯನ್ನು ನೀಡಿ ಗೌರವಿಸಿದರು.

 ‘‘ಇಲ್ಲಿನ ನಿವಾಸಿಗಳು ನನಗೆ ವೇಸ್ಟಿ ನೀಡಿ ಗೌರವಿಸಿದರು. ಅವರು ಕೊಟ್ಟ ವೇಸ್ಟಿ ನನಗೆ ಲಭಿಸಿದ ಗೌರವವಾಗಿದೆ’’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News