ಎಲ್ಲ ರೈಲುಗಳಲ್ಲಿ ಶೀಘ್ರವೇ ವೈಫೈ ಸೌಲಭ್ಯ: ಗೋಯಲ್

Update: 2019-10-24 03:48 GMT

ಹೊಸದಿಲ್ಲಿ, ಅ.24: ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ ಮೂರು- ನಾಲ್ಕು ವರ್ಷಗಳ ಒಳಗಾಗಿ ಎಲ್ಲ ರೈಲುಗಳಲ್ಲಿ ವೈಫೈ ಸೌಲಭ್ಯವನ್ನು ಪ್ರಯಾಣಿಕರಿಗೆ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಪ್ರಕಟಿಸಿದ್ದಾರೆ. ಇದು ಪ್ರಯಾಣಿಕರಿಗೆ ಒದಗಿಸುವ ಸೇವೆ ಮತ್ತು ಸುರಕ್ಷೆ ಸುಧಾರಣೆಗೆ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ.

"ಇದೀಗ ದೇಶದ 5,200 ನಿಲ್ದಾಣಗಳಿಗೆ ವೈಫೈ ತಲುಪಿದೆ. 6,500 ನಿಲ್ದಾಣಗಳಿಗೆ ತಲುಪುವ ಗುರಿ ಇದೆ. ಆಪ್ಟಿಕಲ್ ಫೈಬರ್ ತಲುಪದಂಥ ಅಥವಾ ಪೂರಕ ಪರಿಸರ ಇಲ್ಲದ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವ 1,000 ನಿಲ್ದಾಣಗಳಿಗೆ ಈ ಸೇವೆ ಒದಗಿಸಲು ವಿಳಂಬವಾಗಬಹುದು. ಇದಕ್ಕೆ ಆರರಿಂದ ಎಂಟು ತಿಂಗಳು ಬೇಕಾಗಬಹುದು. ಆ ಬಳಿಕ ಸಂಚರಿಸುವ ರೈಲುಗಳಲ್ಲಿ ವೈಫೈ ಒದಗಿಸುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಎಲ್ಲ ಪ್ರಯಾಣಿಕ ರೈಲುಗಳಲ್ಲಿ ವೈಫೈ ಸೌಲಭ್ಯ ಇರುತ್ತದೆ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News