ಅತ್ಯಾಚಾರ ಆರೋಪಿ ಬಿಷಪ್ ಗೆ ನೋಟಿಸ್ ನೀಡಿದ ಇನ್‍ಸ್ಪೆಕ್ಟರ್ ಎತ್ತಂಗಡಿ

Update: 2019-10-27 11:08 GMT
ಬಿಷಪ್ ಫ್ರಾಂಕೊ ಮುಲಕ್ಕಲ್

ಹೊಸದಿಲ್ಲಿ : ಕ್ರೈಸ್ತ ಭಗಿನಿಯ ಮೇಲೆ ಅತ್ಯಾಚಾರಗೈದ ಆರೋಪ ಹೊತ್ತ ಬಿಷಪ್ ಫ್ರಾಂಕೊ ಮುಲಕ್ಕಲ್ ಗೆ ನೋಟಿಸ್ ಜಾರಿಗೊಳಿಸಿದ  ವೈಕೊಮ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಮೋಹನದಾಸ್ ಎಂಬವರನ್ನು ತಕ್ಷಣ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಲಯಾಳಂ ಯುಟ್ಯೂಬ್ ಚಾನೆಲ್ ಕ್ರಿಶ್ಚಿಯನ್ ಟೈಮ್ಸ್ ಮೂಲಕ ತನಗೆ ಕಿರುಕುಳವಾಗುವಂತಹ ವೀಡಿಯೊ ಅಪ್‍ಲೋಡ್ ಮಾಡಲಾಗುತ್ತಿದೆ ಹಾಗೂ ಇದರ ಹಿಂದೆ ಆರೋಪಿ ಬಿಷಪ್ ಕೈವಾಡವಿರಬೇಕೆಂದು ಶಂಕಿಸಿ ಸಂತ್ರಸ್ತೆ ವೈಕೊಮ್ ಠಾಣೆಯಲ್ಲಿ ದೂರು ನೀಡಿದ್ದರಲ್ಲದೆ ಕೇರಳ ಮಹಿಳಾ ಆಯೊಗ, ಕೇರಳ ಮಾನವ ಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಲಿಖಿತ ದೂರು ಸಲ್ಲಿಸಿದ್ದರು.

ಆಕೆಯ ದೂರನ್ನು ಪರಿಶೀಲಿಸಿದ ಇನ್‍ಸ್ಪೆಕ್ಟರ್ ಮೋಹನದಾಸ್, ಆರೋಪಿ ಬಿಷಪ್ ಗೆ ಕಳೆದ ಬುಧವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. ಸಂತ್ರಸ್ತೆ ಇಂತಹ ದೂರು ನೀಡಿರುವಾಗ ಆರೋಪಿ ಜಾಮೀನಿನ ಮೇಲೆ ಏಕಿರಬೇಕೆಂದು ನೋಟಿಸಿನಲ್ಲಿ ಪ್ರಶ್ನಿಸಲಾಗಿತ್ತು. ಶುಕ್ರವಾರ  ಮೋಹನದಾಸ್ ಅವರನ್ನು ಕೊಟ್ಟಾಯಂ ಕ್ರೈಂ ಬ್ರ್ಯಾಂಚ್‍ಗೆ ವರ್ಗಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News