ಸ್ಕಾಟ್‍ಲ್ಯಾಂಡ್ ನಲ್ಲಿರುವ ಪಾಟ್ನಾ ಬಗ್ಗೆ ನಿಮಗೆ ಗೊತ್ತೇ ?

Update: 2019-10-29 07:50 GMT
ಫೋಟೊ: scoopwhoop.com

ಹೊಸದಿಲ್ಲಿ : ಬಿಹಾರದ ರಾಜಧಾನಿ ಪಾಟ್ನಾ ಎಂದು ನಮ್ಮೆಲ್ಲರಿಗೂ ಗೊತ್ತು. ಆದರೆ ಸ್ಕಾಟ್‍ಲ್ಯಾಂಡ್ ನಲ್ಲೂ ಒಂದು ಪಾಟ್ನಾ ಇದೆಯೆಂದು ಗೊತ್ತೇ ? ಬಿಹಾರದ ರಾಜಧಾನಿಯಿಂದ ಪ್ರೇರಿತವಾಗಿಯೇ ಈ ಗ್ರಾಮಕ್ಕೆ  ಪಾಟ್ನಾ ಎಂದು ಹೆಸರಿಡಲಾಗಿದೆ. 

ಸ್ಕಾಟ್‍ಲ್ಯಾಂಡ್‍ನ ಈ ಗ್ರಾಮಕ್ಕೆ ಪಾಟ್ನಾ ಹೆಸರಿಡಲು ಕಾರಣವಾದ ವ್ಯಕ್ತಿಯ ತಂದೆ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಪ್ರಾಯಶಃ ಆತನಿಗೆ ಪಾಟ್ನಾ ಮೇಲೆ ಬಹಳ ಪ್ರೀತಿಯಿದ್ದಿರಬೇಕು.

ಇಂತಹುದೇ ಇನ್ನೂ ಹಲವು ಅಚ್ಚರಿಗಳ ಪಟ್ಟಿ ಇಲ್ಲಿವೆ.

ಕೆನಡಾದಲ್ಲೊಂದು  ದಿಲ್ಲಿ - ನಮ್ಮ ರಾಜಧಾನಿ ದಿಲ್ಲಿಯ ಹೆಸರನ್ನೇ ಹೊಂದಿದ ನಗರ ಕೆನಡಾದ ಒಂಟಾರಿಯೋದಲ್ಲಿದೆ.

ಜಪಾನ್ ನಲ್ಲಿ ಕೊಚ್ಚಿ : ಕೇರಳದ ಖ್ಯಾತ ನಗರ ಕೊಚ್ಚಿಯ ಹೆಸರನ್ನು ಜಪಾನ್ ನ ಒಂದು ನಗರವೂ ಹೊಂದಿದ್ದು ಇದೊಂದು ಪ್ರವಾಸಿ ತಾಣವಾಗಿದೆ.

ಅಮೆರಿಕಾದಲ್ಲೂ ಕಲ್ಕತ್ತಾ : ನಮ್ಮ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾ ಹಿಂದೆ ಕಲ್ಕತ್ತಾ ಆಗಿತ್ತು. ಇದೇ ಹೆಸರಿನ ನಗರ ಅಮೆರಿಕಾದಲ್ಲಿ 1870ರಲ್ಲಿ ಸ್ಥಾಪಿತವಾಗಿತ್ತು. ಇದೊಂದು ಕಲ್ಲಿದ್ದಲು ನಗರವಾಗಿದ್ದು ಹೆಚ್ಚು ಜನರು ಅಲ್ಲಿ ವಾಸಿಸುತ್ತಿಲ್ಲ.

ಅಮೆರಿಕಾದ ಲಕ್ನೋ  : ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಹೆಸರು ಅಮೆರಿಕಾದಲ್ಲಿ  5,500 ಎಕರೆ ಗುಡ್ಡ ಪ್ರದೇಶದ ಎಸ್ಟೇಟ್‍ನಲ್ಲಿನ ಬಂಗಲೆಯ ಹೆಸರಾಗಿದೆ. ಲಕ್ನೋ ಅಥವಾ ಕಾಸಲ್ ಇನ್ ದಿ ಕ್ಲೌಡ್ಸ್ ಎಂದು ಅದನ್ನು ಕರೆಯಲಾಗುತ್ತದೆ.

ಪಾಕಿಸ್ತಾನದ ಹೈದರಾಬಾದ್ :  ಪಾಕಿಸ್ತಾನದಲ್ಲಿನ ಹೈದರಾಬಾದ್ ನಗರ ಪ್ರವಾದಿ ಮುಹಮ್ಮದ್ ಸೋದರ ಸಂಬಂಧಿ ಹೈದರ್ ಅಲಿಯ ಸ್ಮರಣೆಗಾಗಿ ಸ್ಥಾಪಿಸಲಾಗಿದೆ.

ಅಮೆರಿಕಾದ ಸೇಲಂ : ನಮ್ಮ ತಮಿಳುನಾಡಿನ ಸೇಲಂ ನಗರದಂತೆಯೇ ಅಮೆರಿಕಾದ ಮೆಸ್ಸಾಚುಸೆಟ್ಸ್ ಸಮೀಪ ಸೇಲಂ ಎಂಬ ಪಟ್ಟಣವಿದೆ.

ಅಮೆರಿಕಾದಲ್ಲೂ ಗುಜರಾತ್ ನ ಬರೋಡಾ : ಅಮೆರಿಕಾದ ಮಿಚಿಗನ್ ರಾಜ್ಯದ ಬೆರ್ರಿಯನ್ ಕೌಂಟಿಯಲ್ಲಿ ಬರೋಡ ಎಂಬ ಗ್ರಾಮವಿದೆ.

ಆಸ್ಟ್ರೇಲಿಯಾದ ಥಾಣೆ : ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿನ ಸಣ್ಣ  ಪಟ್ಟಣದ ಹೆಸರು ಥಾಣೆ.

ಇಂದೋರ್ ಅಮೆರಿಕಾದಲ್ಲೂ ಇದೆ : ಮಧ್ಯ ಪ್ರದೇಶದ ಇಂದೋರ್ ನಗರ ಅಮೆರಿಕಾದ ವೆಸ್ಟ್ ವರ್ಜೀನಿಯಾದಲ್ಲಿನ ಪಟ್ಟಣದ ಹೆಸರು ಕೂಡ ಆಗಿದೆ. ಇಲ್ಲಿ ಹಬ್ರೂ ಶಬ್ದ ಎಂದೋರ್ ಆಗಿದೆ.

ಭಾರತದಲ್ಲೂ ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾ ಆಗಿದ್ದರೆ ಬಿಹಾರದಲ್ಲಿ ಢಾಕಾ ಎಂಬ ಹೆಸರಿನ ವಿಧಾನಸಭಾ ಕ್ಷೇತ್ರವೊಂದಿದೆ.

ರಾಜಸ್ಥಾನದ ಬಾಲಿ : ಇಂಡೊನೇಷ್ಯಾದ ಬಾಲಿ ದ್ವೀಪ ಪ್ರಖ್ಯಾತ ಪ್ರವಾಸಿ ಸ್ಥಳ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲೂ ಬಾಲಿ ಎಂಬ ಪುಟ್ಟ ಪಟ್ಟಣವಿದೆ.

ಪಾಕಿಸ್ತಾನದಲ್ಲೂ ಫರೀದ್‍ ಕೋಟ್ : ಪಂಜಾಬ್ ರಾಜ್ಯದಲ್ಲಿ ಫರೀದ್‍ಕೋಟ್ ಇದ್ದರೆ  ಪಾಕಿಸ್ತಾನದಲ್ಲೂ ಇದೇ ಹೆಸರಿನ ನಗರವಿದೆ. ಮುಂಬೈ ದಾಳಿಗೆ ಕಾರಣವಾದ ಅಜ್ಮಲ್ ಕಸಬ್ ಇದೇ ಫರೀದ್‍ಕೋಟ್ ನಿವಾಸಿಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News