"ದುಷ್ಯಂತ್ ಚೌಟಾಲ ಯಾರೆಂದು ಅವರಿಗೆ ಗೊತ್ತು ಎಂದಾಯಿತು"

Update: 2019-10-29 11:21 GMT

ಹೊಸದಿಲ್ಲಿ : ''ತಂದೆ ಜೈಲಿನಲ್ಲಿರುವಂತಹ ಯಾವುದೇ ದುಷ್ಯಂತ ನಮ್ಮಲ್ಲಿಲ್ಲ. ನಾವಿಲ್ಲಿ ಧರ್ಮ ಮತ್ತು ಸತ್ಯದ ರಾಜಕಾರಣ ಮಾಡುತ್ತಿದ್ದೇವೆ, ಮಹಾರಾಷ್ಟ್ರದಲ್ಲಿ ಬಹಳ ಕ್ಲಿಷ್ಟಕರ ರಾಜಕಾರಣವಿದೆ'' ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಶಿವಸೇನೆ ನಾಯಕ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ  ಪ್ರತಿಕ್ರಿಯಿಸಿರುವ ಜೆಜೆಪಿ ನಾಯಕ ಹಾಗೂ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ, ''ಅದರರ್ಥ ದುಷ್ಯಂತ್ ಚೌಟಾಲ ಯಾರೆಂದು ಅವರಿಗೆ ಗೊತ್ತು ಎಂದಾಯಿತು. ನನ್ನ ತಂದೆ ಆರು ವರ್ಷ ಜೈಲಿನಲ್ಲಿದ್ದರು, ಅವರು (ರಾವತ್) ಯಾವತ್ತೂ ಅವರ ಯೋಗಕ್ಷೇಮ ವಿಚಾರಿಸಿಲ್ಲ. ಅಜಯ್ ಚೌಟಾಲಜೀ ತಮ್ಮ ಶಿಕ್ಷೆ ಅವಧಿ ಪೂರೈಸದೆ ಹೊರ ಬರುವುದಿಲ್ಲ, ಇಂತಹ ಹೇಳಿಕೆ ಸಂಜಯ್ ಜೀ ಅವರ ಘನತೆಗೆ ತಕ್ಕುದಲ್ಲ,'' ಎಂದರು.

''ಅವರ ಪಕ್ಷ (ಶಿವಸೇನೆ) ಬಿಜೆಪಿ ಜತೆ ದೀರ್ಘಕಾಲದಿಂದ ಸಹಯೋಗ ಹೊಂದಿದೆ. ನಮ್ಮ ಪಕ್ಷ ಕೇವಲ 11 ತಿಂಗಳ ಹಿಂದೆ ರಚನೆಯಾಗಿತ್ತು. ಇತರರ ಜತೆ ಜಗಳವಾಡುವುದು ಅಥವಾ ಇತರರನ್ನು ಬೆದರಿಸಲು ರಾಜಕಾರಣವನ್ನು ಬಳಸುವುದು ನಮ್ಮ ಉದ್ದೇಶವಲ್ಲ, ಮುಂದಿನ ಐದು ವರ್ಷ ಪ್ರಾಮಾಣಿಕ ರಾಜಕಾರಣ ನಡೆಸುವುದು ನಮಗೆ ಬೇಕಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News