ಬಲಾತ್ಕಾರದ ವಿಚ್ಛೇದನಕ್ಕೆ ಯತ್ನ: ಐಪಿಎಸ್ ಅಧಿಕಾರಿಯ ಪತ್ನಿಯಿಂದ ದೂರು

Update: 2019-10-30 07:15 GMT

ಹೈದರಾಬಾದ್, ಅ.30: ಯುವ ಐಪಿಎಸ್ ಅಧಿಕಾರಿಯೊಬ್ಬರು ಪತ್ನಿಗೆ ಕಿರುಕುಳ ಮತ್ತು ಪತ್ನಿ ವಿರುದ್ಧ ಅಪರಾಧ ಪಿತೂರಿಗೆ ಮುಂದಾಗುವ ಮೂಲಕ ಬಲಾತ್ಕಾರದ ವಿಚ್ಛೇದನಕ್ಕೆ ಒತ್ತಾಯಪಡಿಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ.
"ಸದ್ಯ ಐಪಿಎಸ್ ಅಧಿಕಾರಿಯಾಗಿರುವ ಕೊಕ್ಕಂತಿ ಮಹೇಶ್ವರ ರೆಡ್ಡಿ ಜತೆ ಕಾಲೇಜು ದಿನಗಳಿಂದಲೂ ಸಂಬಂಧ ಇತ್ತು. ಕಳೆದ ಫೆಬ್ರವರಿಯಲ್ಲಿ ನಮ್ಮಿಬ್ಬರ ವಿವಾಹವಾಗಿತ್ತು. ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಅವರು ಮುಂಬೈ ಐಐಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತಿ ಯುಪಿಎಸ್ಸಿ ಪರೀಕ್ಷೆಯಲ್ಲಿ 126ನೇ ರ್ಯಾಂಕ್‌ನೊಂದಿಗೆ ತೇರ್ಗಡೆಯಾದ ಬಳಿಕ ನಮ್ಮ ಕೌಟುಂಬಿಕ ಸಂಬಂಧ ಹದಗೆಟ್ಟಿತು" ಎಂದು ಮಹಿಳೆ ದೂರಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ರೆಡ್ಡಿ ಮನಸ್ಸು ಬದಲಾಯಿಸಿದ್ದಾರೆ ಎನ್ನುವುದು ಪತ್ನಿ ಭಾವನಾ ಅವರ ಆರೋಪ ಎಂದು ಜವಾಹರ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಭಿಕ್ಷಾಪತಿ ರಾವ್ ಹೇಳಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣರಾದ ಬಳಿಕ, ಬೇರೆ ಮಹಿಳೆಯನ್ನು ವಿವಾಹವಾಗಲು ಅನುವಾಗುವಂತೆ ವಿಚ್ಛೇದನಕ್ಕೆ ಒತ್ತಾಯಪಡಿಸುತ್ತಿದ್ದಾರೆ ಎನ್ನುವುದು ಮಹಿಳೆಯ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News