ಡಿಕೆಶಿ ತಾಯಿ, ಪತ್ನಿ ಅರ್ಜಿಯ ವಿಚಾರಣೆ ನ.4ಕ್ಕೆ ಮುಂದೂಡಿಕೆ

Update: 2019-10-30 05:58 GMT

ಹೊಸದಿಲ್ಲಿ, ಅ.30: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರ ಅರ್ಜಿಯ  ವಿಚಾರಣೆಯನ್ನು ನ.4ಕ್ಕೆ ದಿಲ್ಲಿ ಹೈಕೋರ್ಟ್ ಮುಂದೂಡಿದೆ.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಈಗಾಗಲೇ   ಡಿಕೆಶಿ ಮಗಳು ಐಶ್ವರ್ಯ ಮತ್ತು ಸಹೋದರ ಸುರೇಶ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ನಡೆಸಿದೆ.

ತಾಯಿ ಗೌರಮ್ಮ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸುವಂತೆ ಡಿಕೆಶಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಈ.ಡಿ.ಪರ  ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ವಿಚಾರಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಬಂದಿಲ್ಲ ಎಂದು ಡಿಕೆಶಿ ತಾಯಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News