ಬಾಕ್ಸಿಂಗ್‌: ಒಲಿಂಪಿಕ್ ಟೆಸ್ಟ್ ಇವೆಂಟ್ ನಲ್ಲಿ ಶಿವ ಥಾಪ, ಪೂಜಾ ರಾಣಿಗೆ ಚಿನ್ನ

Update: 2019-10-31 11:35 GMT

ಟೋಕಿಯೊ, ಅ.31: ನಾಲ್ಕು ಬಾರಿ ಎಶ್ಯನ್ ಚಾಂಪಿಯನ್ ಆಗಿದ್ದ   ಬಾಕ್ಸರ್ ಶಿವ ಥಾಪ (63 ಕೆ.ಜಿ) ಮತ್ತು  ಮಹಿಳೆಯರ  ವಿಭಾಗದಲ್ಲಿ  ಪೂಜಾ ರಾಣಿ (75 ಕೆ.ಜಿ) ಇಲ್ಲಿ ನಡೆದ ಒಲಿಂಪಿಕ್ ಟೆಸ್ಟ್   ಬಾಕ್ಸಿಂಗ್ ಇವೆಂಟ್ ನಲ್ಲಿ ಗುರುವಾರ   ಚಿನ್ನ ಜಯಿಸಿದ್ದಾರೆ.
ಇದೇ ವೇಳೆ  ಆಶಿಶ್ (69 ಕೆಜಿ) ಬೆಳ್ಳಿ ಗೆದ್ದುಕೊಂಡಿದ್ದಾರೆ,
ಥಾಪ ಕಝಕಿಸ್ತಾನದ   ಸನಾತಲಿ ಟೋಲ್ಟಾಯೆವ್ ಅವರನ್ನು 5-0 ಅಂತರದಿಂದ  ಮಣಿಸಿ  ಚಿನ್ನ ಪಡೆದರು.
ಏಷ್ಯನ್ ಕ್ರೀಡಾಕೂಟದಲ್ಲಿ  ಕಂಚಿನ ಪದಕ ವಿಜೇತೆ ರಾಣಿ  ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು ಸೋಲಿಸಿ  ಚಿನ್ನದ ನಗೆ ಬೀರಿದರು.
ಈ ವರ್ಷದ ಆರಂಭದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ರಾಣಿ ಬೆಳ್ಳಿ ಪದಕ ಗೆದ್ದಿದ್ದರು.
ಆಶಿಶ್ (69 ಕೆಜಿ)ಅವರು  ಜಪಾನ್‌ನ ಸೆವೊನ್ ಒಕಾಜಾವಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ (51 ಕೆ.ಜಿ), ಸಿಮ್ರಾಂಜಿತ್ ಕೌರ್ (60 ಕೆ.ಜಿ), ಏಶ್ಯನ್ ಬೆಳ್ಳಿ ಪದಕ ವಿಜೇತ ಸುಮಿತ್ ಸಾಂಗ್ವಾನ್ (91 ಕೆ.ಜಿ) ಮತ್ತು ವಹ್ಲಿಂಪುಯಾ (75 ಕೆ.ಜಿ) ಸೆಮಿಫೈನಲ್ ನಲ್ಲಿ ಸೋತು ಕಂಚು ಪದಕಗಳೊಂದಿಗೆ  ಅಭಿಯಾನವನ್ನು ಕೊನೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News