ಜರ್ಮನಿ ಚಾನ್ಸಲರ್ ಮರ್ಕೆಲ್ ಭಾರತಕ್ಕೆ ದ್ವಿದಿನ ಭೇಟಿ, 20 ಒಪ್ಪಂದಕ್ಕೆ ಸಹಿ ಸಾಧ್ಯತೆ

Update: 2019-11-01 05:31 GMT

  ಹೊಸದಿಲ್ಲಿ, ನ.1: ಜರ್ಮನಿಯ ಚಾನ್ಸಲರ್ ಆ್ಯಂಜೆಲೊ ಮರ್ಕೆಲ್ ಭಾರತಕ್ಕೆ ದ್ವಿದಿನ ಭೇಟಿ ಆರಂಭಿಸಿದ್ದು, ಭೇಟಿಯ ವೇಳೆ ಭಾರತ-ಜರ್ಮನಿ ಸುಮಾರು 20 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ನಿನ್ನೆ ರಾತ್ರಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮರ್ಕೆಲ್‌ರನ್ನು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದರು.

ಇಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಮರ್ಕೆಲ್‌ರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬರಮಾಡಿಕೊಂಡರು. ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ತೆರಳಿದ ಮರ್ಕೆಲ್ ರಾಷ್ಟ್ರಪಿತ ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News