ಗುಜರಾತ್‌ಗೆ ಮತ್ತೆ ಚಂಡಮಾರುತದ ಭೀತಿ

Update: 2019-11-04 13:35 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.4: ಈಗ ಅರಬಿ ಸಮುದ್ರದ ಉತ್ತರದಲ್ಲಿರುವ ‘ಮಹಾ’ ಚಂಡಮಾರುತ ಮತ್ತೆ ತನ್ನ ದಿಕ್ಕು ಬದಲಿಸಿಕೊಂಡು ಭಾರತದತ್ತ ಚಲಿಸಿ ಬುಧವಾರ ತಡರಾತ್ರಿ ಅಥವಾ ಗುರುವಾರ ಬೆಳಿಗ್ಗೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗ ಅತ್ಯಂತ ತೀವ್ರ ಚಂಡಮಾರುತದ ರೂಪದಲ್ಲಿರುವ ‘ಮಹಾ’ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಂದರ್ಭ ವೇಗ ಕಳೆದುಕೊಂಡು ತೀವ್ರ ಚಂಡಮಾರುತದ ಸ್ವರೂಪ ಪಡೆಯಲಿದೆ. ಜೊತೆಗೆ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

 ಗುಜರಾತ್‌ನ ಜುನಾಗಢ್, ಗಿರ್ ಸೋಮನಾಥ್, ಅಮ್ರೇಲಿ, ಭಾವನಗರ, ಸೂರತ್, ಭರೂಚ್, ಆನಂದ್, ಅಹ್ಮದಾಬಾದ್, ಬೊಟಾಡ್, ಪೋರಬಂದರ್, ರಾಜಕೋಟ್ ಮತ್ತು ವಡೋದರದಲ್ಲಿ ಬುಧವಾರ ಮತ್ತು ಗುರುವಾರ ಮಳೆಯಾಗಲಿದೆ. ಮಹಾರಾಷ್ಟ್ರದ ಮುಂಬೈ, ಥಾಣೆ, ಪಾಲ್ಘಾರ್ ಹಾಗೂ ಇತರ ಉತ್ತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News