ಮೊಬೈಲ್ ಬ್ರಾಡ್‌ ಬ್ಯಾಂಡ್ ಸ್ಪೀಡ್: ಪಾಕಿಸ್ತಾನ, ನೇಪಾಳಕ್ಕಿಂತಲೂ ಹಿಂದುಳಿದ ಭಾರತ

Update: 2019-11-05 10:35 GMT
Photo: digitaltrends.com

ಹೊಸದಿಲ್ಲಿ, ನ.5: ಮೊಬೈಲ್ ಬ್ರಾಡ್‌ ಬ್ಯಾಂಡ್ ಸ್ಪೀಡ್ ವಿಚಾರದಲ್ಲಿ ಭಾರತ ಸೆಪ್ಟೆಂಬರ್ ತಿಂಗಳಲ್ಲಿ  ತನ್ನ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನ ಹಾಗೂ ನೇಪಾಳಕ್ಕಿಂತಲೂ ಹಿಂದೆ ಅಂದರೆ 128ನೇ  ಸ್ಥಾನದಲ್ಲಿತ್ತು ಎಂದು  ಬ್ರಾಡ್‌ ಬ್ಯಾಂಡ್ ಸ್ಪೀಡ್ ವಿಶ್ಲೇಷಣಾ ಸಂಸ್ಥೆ ಊಕ್ಲಾ ತನ್ನ ವರದಿಯಲ್ಲಿ ಹೇಳಿದೆ.

ಆದರೆ 4ಜಿ ನೆಟ್‌ವರ್ಕ್ ಲಭ್ಯತೆ ವಿಚಾರದಲ್ಲಿ ಹಾಗೂ ಫಿಕ್ಸ್ ಡ್ ಲೈನ್  ಬ್ರಾಡ್ ಬ್ಯಾಂಡ್ ಸ್ಪೀಡ್ ನಲ್ಲಿ ಭಾರತ 72ನೇ ಸ್ಥಾನದಲ್ಲಿದ್ದು ತನ್ನ ನೆರೆಯ ರಾಷ್ಟ್ರಗಳಿಗಿಂತ ಬಹಳಷ್ಟು ಮುಂದಿದೆ.

ಊಕ್ಲಾ ಸಂಸ್ಥೆಯ ಸ್ಪೀಡ್‌ ಫೆಸ್ಟ್ ಗ್ಲೋಬಲ್ ಸೂಚ್ಯಂಕದ ಪ್ರಕಾರ  ಸರಾಸರಿ ಡೌನ್ಲೋಡ್ ಸ್ಪೀಡ್ ಪ್ರತಿ ಸೆಕೆಂಡ್‌ಗೆ 29.5 ಎಂಬಿ ಆಗಿದ್ದು ಅಪ್ಲೋಡ್ ಸ್ಪೀಡ್ 11.34 ಎಂಬಿಪಿಎಸ್ ಆಗಿದೆ. ದಕ್ಷಿಣ ಕೊರಿಯಾ ಜಾಗತಿಕ ಮಟ್ಟದಲ್ಲಿ   95.11 ಎಂಬಿಪಿಎಸ್ ಡೌನ್ಲೋಡ್ ಸ್ಪೀಡ್ ಹಾಗೂ 17.55ಎಂಬಿಪಿಎಸ್ ಅಪ್ಲೋಡ್ ಸ್ಪೀಡ್  ಮೂಲಕ ಮೊಬೈಲ್ ನೆಟ್‌ವರ್ಕ್ ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಭಾರತದಲ್ಲಿ ಡೌನ್ಲೋಡ್ ಸ್ಪೀಡ್  11.18 ಎಂಬಿಪಿಎಸ್ ಹಾಗೂ ಅಪ್ಲೋಡ್ ಸ್ಪೀಡ್ 4.38 ಎಂಬಿಪಿಎಸ್ ಎಂದು ಊಕ್ಲಾ ವರದಿ ಹೇಳಿದೆ.

ಭಾರತದಲ್ಲಿ 11 ದೊಡ್ಡ ನಗರಗಳಲ್ಲಿ ಏರ್‌ಟೆಲ್ ಫಾಸ್ಟೆಸ್ಟ್ ಮೊಬೈಲ್ ಆಪರೇಟರ್ ಆಗಿದ್ದರೆ,  ಭಾರತದ 12ನೇ ಅತಿ ದೊಡ್ಡ ನಗರದಲ್ಲಿ ಜಿಯೋ ಹಾಗೂ ಏರ್‌ಟೆಲ್ ಸ್ಪೀಡ್ 2019ರ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಸಮನಾಗಿತ್ತು ಎಂದು ವರದಿ ತಿಳಿಸಿದೆ.

ಏರ್‌ಟೆಲ್ ಗರಿಷ್ಠ ಸ್ಪೀಡ್ ನಾಗ್ಪುರದಲ್ಲಿ ದಾಖಲಾಗಿತ್ತು. 4ಜಿ ಲಭ್ಯತೆ ವಿಚಾರದಲ್ಲಿ 2019ರ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಜಿಯೋ ನಿರ್ವಹಣೆ ಗರಿಷ್ಠ ಶೇ 99.1 ಆಗಿದ್ದರೆ ನಂತರದ ಸ್ಥಾನಗಳು ಏರ್‌ಟೆಲ್ (ಶೇ 94.9), ಐಡಿಯಾ( ಶೇ 87.5) ಹಾಗೂ ವೊಡಾಫೋನ್‌ಗೆ (ಶೇ 85.2) ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News