ಪಕ್ಷದ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ

Update: 2019-11-05 13:23 GMT

ಮುಝಫ್ಫರನಗರ್, ನ.5:  ಉತ್ತರ ಪ್ರದೇಶದ ಮುಝಫ್ಫರನಗರ್ ಜಿಲ್ಲೆಯ ಬುಧಾನ ಪಟ್ಟಣದ  ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಕ್ಷದ ನಾಯಕ ಆಶಿಷ್ ಜೈನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆ ಸೋಮವಾರ ನಡೆದಿದೆಯೆನ್ನಲಾಗಿದೆ. ಆರೋಪಿ ಜೈನ್ ಬಿಜೆಪಿ ಮಂಡಲ ಘಟಕದ ಉಪಾಧ್ಯಕ್ಷನಾಗಿದ್ದರೆ ಸಂತ್ರಸ್ತೆ ಮಹಿಳಾ ಮೋರ್ಚಾ ಸದಸ್ಯೆಯಾಗಿದ್ದಾಳೆ. ಆರೋಪಿ ತನ್ನ ಮನೆಗೆ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಿದ್ದ ಹಾಗೂ ತಾನು ವಿರೋಧಿಸಿದ್ದಕ್ಕೆ ಬೆದರಿಕೆಯೊಡ್ಡಿದ್ದ ಎಂದು  ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 504, 506 ಹಾಗೂ 452 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News