ಸುಪ್ರೀಂಕೋರ್ಟ್ ತೀರ್ಪು ತೃಪ್ತಿಕರವಾಗಿಲ್ಲ, ಆದರೆ ಗೌರವಿಸುತ್ತೇವೆ: ಸುನ್ನಿ ವಕ್ಫ್ ಬೋರ್ಡ್

Update: 2019-11-09 06:51 GMT

ಹೊಸದಿಲ್ಲಿ, ನ.9: ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ತೀರ್ಪು ನಮ್ಮ ನಿರೀಕ್ಷೆಯಂತೆ ಬಂದಿಲ್ಲ. ತೀರ್ಪಿನ ಬಗ್ಗೆ ನಮಗೆ ತೃಪ್ತಿಯಿಲ್ಲ. ತೀರ್ಪನ್ನು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಝಫರ್‌ ಯಾಬ್ ಜಿಲಾನಿ ತಿಳಿಸಿದರು.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ಸರಿಯಲ್ಲ. ಸುಪ್ರೀಂ ತೀರ್ಪಿನ ಕೆಲ ಸಂಗತಿಗಳನ್ನು ಒಪ್ಪಲಾಗದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News