ಎಐಎಂಪಿಎಲ್‌ಬಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ: ಹಿಂದೂ ಮಹಾ ಸಭಾ ವಕೀಲ

Update: 2019-11-18 16:59 GMT
ಫೈಲ್ ಚಿತ್ರ

  ಹೊಸದಿಲ್ಲಿ, ನ. 18: ಅಯೋಧ್ಯೆ ಭೂ ಒಡೆತನ ವಿವಾದದಲ್ಲಿ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕಕ್ಷಿದಾರನಲ್ಲ. ಆದುದರಿಂದ ಅವರಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಹಕ್ಕು ಇಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕೀಲರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಎಐಎಂಪಿಎಲ್‌ಬಿ ಕಕ್ಷಿದಾರನಲ್ಲ. ಸುನ್ನಿ ವಕ್ಫ್ ಮಂಡಳಿ ಮರು ಪರಿಶೀಲನೆಗೆ ಮನವಿ ಸಲ್ಲಿಸಲು ಚಿಂತಿಸಬಹುದು. ಕಕ್ಷಿದಾರರು ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಮನವಿ ಸಲ್ಲಿಸಬಹುದು ಎಂದು ಶನಿವಾರ ಸಿನ್ಹಾ ಹೇಳಿದ್ದಾರೆ.

ವಿಷಯದ ಪ್ರತಿಯೊಂದು ಅಂಶವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದೆ. ವಿವಾದಿತ ನಿವೇಶನ ಹಾಗೂ ಕಟ್ಟಡಗಳ ವಿಶೇಷ ಸ್ವಾಧೀನವನ್ನು ಸಾಬೀತುಪಡಿಸಲು ಮುಸ್ಲಿಮರು ವಿಫಲರಾಗಿದ್ದಾರೆ ಎಂಬ ನಿರ್ಧಾರಕ್ಕೆ ಅದು ಬಂದಿದೆ ಎಂದು ಸಿನ್ಹಾ ಹೇಳಿದ್ದಾರೆ.

ಸಂವಿಧಾನದ ವಿಧಿ 142ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ದೋಷ ಇದೆ ಎಂದು ಎಐಎಂಪಿಎಲ್‌ಬಿ ಹೇಗೆ ಪತ್ತೆ ಮಾಡುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News