ಎನ್‍ ಸಿಪಿ 'ಶಾಸಕ ನಾಪತ್ತೆ' ವಿರುದ್ಧ ಪೊಲೀಸರಿಗೆ ದೂರು

Update: 2019-11-24 10:25 GMT

ಮುಂಬೈ: ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಹಾಗೂ ಡಿಸಿಎಂ ಆಗಿ ಎನ್ ಸಿಪಿಯ ಅಜಿತ್ ಪವಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಶಹಾಪುರ ಕ್ಷೇತ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‍ಸಿಪಿ) ಮಾಜಿ ಶಾಸಕ ತಮ್ಮದೇ ಪಕ್ಷದ 'ಶಾಸಕನ ನಾಪತ್ತೆ' ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶನಿವಾರ ಮುಂಜಾನೆ ರಾಜಭವನಕ್ಕೆ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ ದೌಲತ್  ದರೋಡಾ ಆ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಮಾಜಿ ಶಾಸಕ ಪಾಂಡುರಂಗ ದರೋರಾ ದೂರು ನೀಡಿದ್ದಾರೆ. ದೌಲತ್ ದರೋರಾ ಅವರು ಶಹಾಪುರ ಕ್ಷೇತ್ರದ ಶಾಸಕ.

ಶುಕ್ರವಾರ ರಾತ್ರಿಯಿಂದ ಅವರು ಶಹಾಪುರದಲ್ಲಿಲ್ಲ ಎನ್ನಲಾಗಿದೆ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ. ಕ್ಷೇತ್ರದಿಂದ ಹೊರಡುವ ಮುನ್ನ ಯಾರಿಗೂ ಮಾಹಿತಿಯನ್ನೂ ನೀಡಿಲ್ಲ. ಶನಿವಾರ ಸಂಜೆವರೆಗೂ ಅವರ ಇರುವಿಕೆ ಬಗ್ಗೆ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ದೂರು ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಆದರೆ ದರೋರಾ ಮುಂಬೈನಲ್ಲಿದ್ದಾರೆ. ಅವರು ನಾಪತ್ತೆಯಾಗಿಲ್ಲ ಎಂದು ಹೇಳಿರುವ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News