ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 100 ರೂ.ತಲುಪಿದ ಈರುಳ್ಳಿ

Update: 2019-11-28 18:11 GMT

ಪುಣೆ, ನ.28: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 100 ರೂ.ಗೆ ಜಿಗಿದಿದ್ದು,ಡಿಸೆಂಬರ್ ಉತ್ತರಾರ್ಧದಲ್ಲಿ ಹೊಸ ಬೆಳೆಯ ಆವಕದವರೆಗೂ ಇದೇ ಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ.

ಮಹಾರಾಷ್ಟ್ರದ ಹೆಚ್ಚಿನ ಸಗಟು ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 90 ರೂ.ಗಿಂತ ಹೆಚ್ಚಿನ ಬೆಲೆಗಳಲ್ಲಿ ಮಾರಾಟವಾಗಿದ್ದರೆ ಕೆಲವು ಕಡೆ ಮೂರಂಕಿಯ ಬೆಲೆಗೂ ಮಾರಾಟವಾಗಿರುವುದು ವರದಿಯಾಗಿದೆ.

ದಕ್ಷಿಣ ಭಾರತದ ಹೆಚ್ಚಿನ ನಗರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ 100 ರೂ.ಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದರೆ ಉತ್ತರ ಭಾರತದಲ್ಲಿ 100 ರೂ.ಗಡಿಯನ್ನು ಸಮೀಪಿಸಿದೆ.

ಆದರೆ ರಾಜಸ್ಥಾನದಿಂದ ಹೊಸದಾಗಿ ಮಾಲು ಪೂರೈಕೆಯಾಗಿರುವುದರಿಂದ ದಿಲ್ಲಿಯ ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 30 ರೂ.ನಿಂದ 60 ರೂ.ಬೆಲೆಗಳಲ್ಲಿ ಮಾರಾಟವಾಗುತ್ತಿದೆ.

ಉತ್ತರ ಭಾರತದ ಹೆಚ್ಚಿನ ಮಾರುಕಟ್ಟೆಗಳಿಗೆ ಪ್ರತಿ ದಿನ ಅಘಾನಿಸ್ತಾನದಿಂದ ಎರಡು ಟ್ರಕ್ ಲೋಡ್ ಈರುಳ್ಳಿ ಆಮದಾಗುತ್ತಿದೆ. ಮುಂಬೈಗೆ ಪ್ರತಿ ವಾರ ಈಜಿಪ್ಟ್,ಹಾಲಂಡ್ ಮತ್ತು ಇರಾನ್‌ಗಳಿಂದ ಸುಮಾರು 2,000 ಟನ್ ಈರುಳ್ಳಿ ಆಮದಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News