ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನ

Update: 2023-06-30 05:28 GMT

1907: ಪಶ್ಚಿಮ ವರ್ಜೀನಿಯಾದ ಮೋನೊಂಗಾ ಎಂಬಲ್ಲಿ ಕಲ್ಲಿದ್ದಲು ಗಣಿ ಸ್ಫೋಟಗೊಂಡ ಪರಿಣಾಮ 361 ಜನರು ಮೃತರಾದರು.

1929: ಟರ್ಕಿಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಒದಗಿಸಲಾಯಿತು.

1973: ಬಹರೈನ್‌ನ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು.

1992: ಭಾರತೀಯ ಸೌಹಾರ್ದ, ಜಾತ್ಯತೀತ ಪರಂಪರೆಗೆ ಧಕ್ಕೆ ತರುವ ಕೆಲಸ ನಡೆಯಿತು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕರ ಸೇವಕರು ಕಾನೂನು ಉಲ್ಲಂಘಿಸಿ ಧ್ವಂಸಗೊಳಿಸಿದರು. ಈ ಘಟನೆಯು ಭಾರತದಲ್ಲಿ ಸಹೋದರತ್ವ ತತ್ವದೊಂದಿಗೆ ಬದುಕುತ್ತಿದ್ದ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷದ ಬೆಂಕಿ ಹೊತ್ತಿಸಿತು. ದೇಶದ ಹಲವು ಭಾಗಗಳಲ್ಲಿ ಇದು ಕೋಮು ಹಿಂಸೆಗೂ ಪ್ರಚೋದನೆ ನೀಡಿತು. ಈ ವೇಳೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಕೃತ್ಯಕ್ಕೆ ಬೆಂಬಲ ನೀಡಿತ್ತು ಎಂಬ ಆರೋಪಗಳು ಕೇಳಿಬಂದವು.

2006: ಮಂಗಳ ಗ್ರಹದ ಎರಡು ಕಡೆ ನೀರು ಕಂಡು ಬಂದಿದೆ ಎಂದು ನಾಸಾ ಸಂಸ್ಥೆಯು ಹೇಳಿಕೆ ನೀಡಿತು.

2017: ಅತ್ಯಂತ ದೂರದ ಬ್ಲಾಕ್ ಹೋಲ್( ಕಪ್ಪುರಂಧ್ರ) ‘ಸುಪರ್‌ಮ್ಯಾಸ್ಸಿವ್’ನ್ನು ಕಂಡುಹಿಡಿದಿರುವುದಾಗಿ ಖಗೋಳಶಾಸ್ತ್ರಜ್ಞರು ಘೋಷಿಸಿದರು. ಈ ರಂಧ್ರವು 13 ಬಿಲಿಯನ್ ಬೆಳಕಿನ ವರ್ಷಗಳಷ್ಟು ದೂರ ಮತ್ತು ಸೂರ್ಯನಿಗಿಂತ 800 ಪಟ್ಟು ದೊಡ್ಡದಿದೆ ಎಂದು ಹೇಳಲಾಗಿದೆ.

1945: ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಪದ್ಮಶ್ರೀ ಶೇಖರ್ ಕಪೂರ್ ಜನ್ಮದಿನ.

1950: ಭಾರತದ ರಾಯಭಾರಿ ನಿರುಪಮಾ ರಾವ್ ಜನ್ಮದಿನ.

1988: ಭಾರತದ ಕ್ರಿಕೆಟಿಗ ರವೀಂದ್ರ ಜಡೇಜಾ ಜನ್ಮದಿನ.

1956: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ(ನಿಧನ) ಹೊಂದಿದ ದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ