ಅಪೋಲೊ 14 ಚಂದ್ರನ ಅಂಗಳಕ್ಕೆ
1917: ಮೆಕ್ಸಿಕೊ ಅಧ್ಯಕ್ಷ ವೆನುಸ್ಟಿಯಾನೊ ಕ್ಯಾರಂಝಾ ತಮ್ಮ ದೇಶದ ಸಂವಿಧಾನ ರಚನೆಯನ್ನು ಘೋಷಿಸಿದರು.
1923: ಸಾವಿರಾರು ಸಮಾಜವಾದಿ ಹಾಗೂ ಕಮ್ಯುನಿಸ್ಟ್ ನಾಯಕರನ್ನು ಇಟಲಿ ಸರಕಾರ ಬಂಧನದಲ್ಲಿಟ್ಟಿತು.
1936: ವಿಶ್ವವಿಖ್ಯಾತ ನಟ ಚಾರ್ಲಿ ಚಾಪ್ಲಿನ್ ನಿರ್ದೇಶನ ಹಾಗೂ ನಟನೆಯ ಮೂಕಿ ಚಿತ್ರ ಮಾಡರ್ನ್ ಟೈಮ್ಸ್ ಇಂಗ್ಲೆಂಡ್‌ನಲ್ಲಿ ಬಿಡುಗಡೆಗೊಂಡಿತು.
1971: ಅಮೆರಿಕದ ಬಾಹ್ಯಾಕಾಶ ನೌಕೆ ಅಪೋಲೊ 14 ಚಂದ್ರನ ಅಂಗಳಕ್ಕೆ ತಲುಪುವುದರೊಂದಿಗೆ ನೌಕೆಯ ಕಮಾಂಡರ್ ಅಲನ್ ಶೆಫರ್ಡ್, ಚಂದ್ರನ ಅಂಗಳದ ಮೇಲೆ ಕಾಲಿಟ್ಟ 5ನೇ ಮಾನವ ಎನಿಸಿಕೊಂಡರು. ಇವರ ಜೊತೆ ಗಗನಯಾತ್ರಿ ಎಡ್ಗರ್ ಡಿ.ಮಿಚೆಲ್ ಇದ್ದರು.
1994: ಬೋಸ್ನಿಯಾ ದೇಶದ ರಾಜಧಾನಿ ಸಾರಾಜೆವೊದ ಪ್ರಮುಖ ಮಾರ್ಕೆಟ್ ಪ್ರದೇಶದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡ ಪರಿಣಾಮ 68 ಜನರು ಸಾವಿಗೀಡಾದರು. ಸುಮಾರು 200ಕ್ಕಿಂತ ಅಧಿಕ ಜನರು ಗಾಯಗೊಂಡರು.
2011: ಸೆರ್ಬಿಯಾ ರಾಜಧಾನಿ ಬೆಲ್‌ಗ್ರೇಡ್ ನಲ್ಲಿ ಆರ್ಥಿಕತೆಯ ಕುಸಿತ ಹಾಗೂ ಸರಕಾರದ ಪರಿಣಾಮಕಾರಿಯಲ್ಲದ ನೀತಿಗಳ ವಿರುದ್ಧ ಪ್ರತಿಭಟಿಸಿ ಸುಮಾರು 50,000 ಜನರು ಬೃಹತ್ ರ್ಯಾಲಿ ನಡೆಸಿದರು.
1936: ಕನ್ನಡದ ನವ್ಯ ಸಾಹಿತಿಗಳಲ್ಲಿ ಪ್ರಮುಖರಾದ, ನಿತ್ಯೋತ್ಸವ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಜನ್ಮದಿನ.
1976: ಖ್ಯಾತ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜನ್ಮದಿನ.
1990: ಭಾರತದ ಕ್ರಿಕೆಟ್ ಆಟಗಾರ ಭುವನೇಶ್ವರ್ ಕುಮಾರ್ ಜನ್ಮದಿನ.
1927: ಸೂಫಿ ಪಂಥದ ಉಪಾಧ್ಯಾಯ ಇನಾಯತ್ ಖಾನ್ ನಿಧನರಾದರು.